ಶಿರೂರು: ಸಪರಿವಾರ ಶ್ರೀ ಸಂಕಮ್ಮ ಮಾಸ್ತಿ ದೈವಸ್ಥಾನ ಸಂಕದಗುಂಡಿ ಶಿರೂರು ಇದರ ಪುನರ್ ಪ್ರತಿಷ್ಠಾ ಶ್ರೀ ಸಂಕಮ್ಮ ಮಾಸ್ತಿ ಜಟ್ಟಿಗೇಶ್ವರ ಮತ್ತು ಹೈಗುಳಿ ದೇವರ ಪುನರ್ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮ ಏಪ್ರಿಲ್ 07 ರಂದು ನಡೆಯಲಿದೆ.
ಏ.06 ರಂದು ಬೆಳಿಗ್ಗೆ ಗುರು ಗಣೇಶ ಪೂಜೆ,ಪುಣ್ಯಾಹ,ಮಾತೃಕಾ ಪೂಜೆ ಹಾಗೂ ಮುಂತಾದ ಪೂಜಾ ವಿಧಿ ವಿಧಾನಗಳು ನಡೆಯಲಿದೆ.
ಏ.07 ರಂದು ಬೆಳಿಗ್ಗೆ ಗಣೇಶ ಪೂಜೆ, ಪುಣ್ಯಾಹ, ಶ್ರೀ ಸಂಕಮ್ಮ ಮಾಸ್ತಿ ಜಟ್ಟಿಗೇಶ್ವರ ಮತ್ತು ಹೈಗುಳಿ ಗಣಗಳ ಪುನರ್ ಪ್ರತಿಷ್ಠೆ, ಮಹಾ ಮಂಗಳಾರತಿ,ಪ್ರಸಾದ ವಿತರಣೆ ಹಾಗೂ ಮದ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ರಾತ್ರಿ 9 ಗಂಟೆಗೆ ಶ್ರೀ ಈಶ್ವರ ಮಾರಿಕಾಂಬಾ ಕೃಪಾಪೋಷಿತ ಯಕ್ಷಗಾನ ಮಂಡಳಿ ಕಳವಾಡಿ ಇವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ದೈವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
