ಬೈಂದೂರು: ಹಾಡುಹಗಲೆ ಮನೆಯ ಬೀಗ ಮುರಿದು ಒಳನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಗುರುವಾರ ಇಲ್ಲಿನ ಬೈಂದೂರು ತಾಲೂಕಿನ ಪಡುವರಿ ಎಂಬಲ್ಲಿ ನಡೆದಿದೆ.

ಘಟನೆಯ ವಿವರ: ಇಲ್ಲಿನ ಪರಮೇಶ್ವರ ಪಟವಾಲ್ ಎನ್ನುವವರ ಮನೆಗೆ ನುಗ್ಗಿದ ಕಳ್ಳರು ಹಾಡುಹಗಲೆ ಅಂದಾಜು 20 ಪವನ್ ಚಿನ್ನ ಹಾಗೂ ಎರಡು ಲಕ್ಷಕ್ಕೂ ಅಧಿಕ ನಗದು ದೋಚಿ ಪರಾರಿಯಾಗಿದ್ದಾರೆ.ಮನೆಯಲ್ಲಿ ಪಟವಾಲ್ ರವರ ಮಗ, ಮಗಳು ಉದ್ಯೋಗಕ್ಕೆ ತೆರಳಿದ್ದು ಯಾರು ಇಲ್ಲದಿರುವ ಖಚಿತ ಮಾಹಿತಿ ಮೇರೆಗೆ ಮನೆಯ ಹಿಂಬದಿಯ ಮೂಲಕ ಒಳನುಗ್ಗಿ ಬಾಗಿಲು ಮುರಿದು ಕವಾಟಿನಲ್ಲಿರುವ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.ಬೆಳಿಗ್ಗೆ 10 ರಿಂದ ಸುಮಾರು 01  ಗಂಟೆಯ ಒಳಗೆ ಈ ಕಳ್ಳತನ ನಡೆದಿದೆ.ಒಟ್ಟು ಕಳ್ಳತನದ ಮಾಹಿತಿ ಇನ್ನಷ್ಟೆ ದೊರೆಯಬೇಕಿದೆ.

ಘಟನಾ ಸ್ಥಳಕ್ಕೆ ಆರಕ್ಷಕ ಅಧಿಕಾರಿಗಳು,ಬೆರಳಚ್ಚು ತಂಡ,ಶ್ವಾನದಳ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

 

Leave a Reply

Your email address will not be published. Required fields are marked *

3 × 4 =