ಬೈಂದೂರು: ಮಾರ್ಚ್ 31 ರಂದು ತ್ರಾಸಿ ಸಾತ್ವಿಕ್ ಲಾಡ್ಜ್ ಸಮೀಪ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅತ್ಯಾಧುನಿಕ ಸೌಲಭ್ಯದ ಹವಾನಿಯಂತ್ರಿತ ಪ್ರೆಸ್ಟೀಜ್ ಪ್ಯಾಲೆಸ್ ಸಭಾಭವನ ಉದ್ಘಾಟನೆ ನಡೆಯಲಿದೆ.ಶಿರೂರು ಕರಾವಳಿ ಆಶಾ ನಿಲಯದ ಸುಭಾಷ್ ಸೀತಾರಾಮ ಶೆಟ್ಟಿ ಮಾಲಕತ್ವದ ಈ ಸಭಾಭವನ ಅತ್ಯಾಧುನಿಕ ವ್ಯವಸ್ಥೆ ಜೊತೆಗೆ ವಿಶಾಲ ಪಾರ್ಕಿಂಗ್, ಸುಸಜ್ಜಿತ ಸಭಾಭವನ, ವಿಶಾಲ ಆಡುಗೆ ಕೋಣೆ ಅತ್ಯುತ್ತಮ ಕ್ಯಾಟರಿಂಗ್ ವ್ಯವಸ್ಥೆ ಹಾಗೂ ಮಿನಿಹಾಲ್ ಸೇರಿದಂತೆ ಹಲವು ಸೌಲಭ್ಯ ಒಳಗೊಂಡಿದೆ.

ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅನುವಂಶಿಯ ಆಡಳಿತ ಮೊಕ್ತೇಸರ ಸಿ.ಸದಾಶಿವ ಶೆಟ್ಟಿ ನೂತನ ಸಭಾ ಭವನವನ್ನು ಉದ್ಘಾಟಿಸಲಿದ್ದಾರೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ನೂತನ ಭೋಜನಾಲಯವನ್ನು ಉದ್ಘಾಟಿಸಲಿದ್ದಾರೆ. ಶ್ರೀ ಶನೀಶ್ವರ ಆಜ್ರಿ ಚೋನನಮನೆ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ ಶೆಟ್ಟಿ ನಕ್ಷತ್ರ ಬ್ಯಾಂಕ್ವೆಟ್ ಹಾಲ್ ಉದ್ಘಾಟಿಸಲಿದ್ದಾರೆ.ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ನಾಮಫಲಕ ಅನಾವರಣಗೊಳಿಸಲಿದ್ದಾರೆ.ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ದೀಪ ಪ್ರಜ್ವಲನೆಗೈಯಲಿದ್ದಾರೆ.ಉಡುಪಿ – ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ಜೋತಿಷ್ಯ ವಿದ್ವಾನ್ ಡಾ.ರಮಾನಂದ ಭಟ್ ಎನ್.ಆಶೀರ್ವಚನಗೈಯಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕಾಂಗ್ರೆಸ್ ಮುಖಂಡ ದಿನೇಶ ಹೆಗ್ಡೆ ಮೊಳಹಳ್ಳಿ,ಪ್ರಣಯ್ ಕುಮಾರ್ ಶೆಟ್ಟಿ ಹಕ್ಲಾಡಿ,ತ್ರಾಸಿ ಗ್ರಾ.ಪಂ ಅಧ್ಯಕ್ಷ ಮಿಥುನ್ ದೇವಾಡಿಗ,ಉದ್ಯಮಿ ಬಿ.ಎಸ್.ಪ್ರಶಾಂತ ಶೆಟ್ಟಿ, ಗಂಗೊಳ್ಳಿ ಠಾಣೆಯ ಠಾಣಾಧಿಕಾರಿ ಹರೀಶ್ ನಾಯ್ಕ ಆಗಮಿಸಲಿದ್ದಾರೆ.ಬಳಿಕ ಅರೆಹೊಳೆ ಪ್ರತಿಷ್ಠಾನ ಮಂಗಳೂರು ಇವರಿಂದ ಬಿಡುವನೇ ಬ್ರಹ್ಮಲಿಂಗ ಯಕ್ಷ ನೃತ್ಯ ರೂಪಕ ನಡೆಯಲಿದೆ ಹಾಗೂ ರಾತ್ರಿ 08 ಗಂಟೆಗೆ ಪ್ರೀತಿ ಸುಭಾಷ್ ಕುಮಾರ್ ಶೆಟ್ಟಿ ಇವರ ಹರಕೆ ಬಯಲಾಟವಾಗಿ ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಯಕ್ಷಗಾನ ಮಂಡಳಿ ಇವರಿಂದ ಕೊಲ್ಲೂರು ಕ್ಷೇತ್ರ ಮಹಾತ್ಮೆ ಹಾಗೂ ಗಿರಿಜಾ ಕಲ್ಯಾಣ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಪ್ರೆಸ್ಟೀಜ್ ಪ್ಯಾಲೆಸ್ ಸಭಾಭವನದ ಮಾಲಕರಾದ ಸುಭಾಷ್ ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

News/ GIri Shiruru

 

Leave a Reply

Your email address will not be published. Required fields are marked *

8 + 6 =