ಶಿರೂರು; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಇದರ ವತಿಯಿಂದ 2024-25ನೇ ಸಾಲಿನ ಗ್ರಾಮ ಕಲ್ಯಾಣ ಯೋಜನೆಯಡಿ ಯುವಶಕ್ತಿ ಕರಾವಳಿ ಇದರ ಸಮುದಾಯ ಭವನ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸುಮಾರು ಒಂದು ಲಕ್ಷ ರೂಪಾಯಿ ಮೊತ್ತದ ಸಹಾಯಧನದ ಮಂಜೂರಾತಿ ಪತ್ರವನ್ನು ಯುವಶಕ್ತಿ ಸಂಘಕ್ಕೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷ ವಾಸು ಮೇಸ್ತ,ಜಿಲ್ಲಾ ಜನಜಾಗ್ರತಿ ವೇದಿಕೆಯ ಸದಸ್ಯ ರಾಮ ಮೇಸ್ತ,ಧ.ಗ್ರಾ.ಯೋ ತಾಲೂಕು ಯೋಜನಾಧಿಕಾರಿ ವಿನಾಯಕ ಪೈ, ಯುವಶಕ್ತಿ ಅಧ್ಯಕ್ಷ ಯಶವಂತ ಬಿಲ್ಲವ,ಯುವಶಕ್ತಿ ಮಾಜಿ ಅಧ್ಯಕ್ಷ ಅರುಣ್ ಕುಮಾರ್ ಶಿರೂರು,ಮಾಜಿ ಕಾರ್ಯದರ್ಶಿ ಮಹೇಶ್ ಮೊಗೇರ್,ಮಾಜಿ ಅಧ್ಯಕ್ಷ ಮಂಗಳು ಬಿಲ್ಲವ, ಕಾರ್ಯದರ್ಶಿ ನಾಗರಾಜ ಚಂಬಿತ್ಲು,ವಲಯ ಮೇಲ್ವಿಚಾರಕ ರಾಮ ಎನ್,ಪದಾಽಕಾರಿ ಸುಜಾತ, ಸೇವಾಪ್ರತಿನಿಧಿ ಪ್ರತಿಮಾ,ಕರಾವಳಿ ಒಕ್ಕೂಟದ ಅಧ್ಯಕ್ಷ ವಿನಾಯಕ ಪೂಜಾರಿ, ಶಿರೂರು ಸಿ ಒಕ್ಕೂಟದ ಅಧ್ಯಕ್ಷನ ಗಿರೀಶ್ ಮೇಸ್ತ, ಕರಾವಳಿ ಒಕ್ಕೂಟದ ಉಪಾಧ್ಯಕ್ಷೆ ಚೆನ್ನಮ್ಮ ಹಾಗೂ ಯುವಶಕ್ತಿ ಸರ್ವ ಸದಸ್ಯರು ಹಾಜರಿದ್ದರು.
