ಬೈಂದೂರು,ಮಾ.4: ಸಿದ್ದೇಶ್ವರ ಹೋಳಿ ಸಮಿತಿ ಹೊಸೂರು ಯಡ್ತರೆ ಗ್ರಾಮ ಇದರ ಹೋಳಿ ಸಂಭ್ರಮ ಹೊಸೂರಿನಲ್ಲಿ ಬುಧವಾರ ನಡೆಯಿತು.ಇಲ್ಲಿನ ಮರಾಠಿ ಸಮುದಾಯ ಪ್ರತಿ ವರ್ಷ ಹೋಳಿ ಹಬ್ಬವನ್ನು ಅತ್ಯಂತ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿದ್ದು ಒಂದು ವಾರಗಳ ಕಾಲ ವಿವಿಧ ಊರುಗಳಿಗೆ ತೆರಳಿ ಹೋಳಿ ಕುಣಿತ ನಡೆಸುತ್ತಾರೆ.ಸಮುದಾಯದ ಊರಿನ ಮುಖ್ಯಸ್ಥರ ಮನೆಯಲ್ಲಿ ಸಮಾಪನಗೊಳ್ಳಲಿದೆ.ಹೊಸೂರು ಸಿದ್ದೇಶ್ವರ ಹೋಳಿ ಸಮಿತಿ ವತಿಯಿಂದ ಪ್ರತಿ ವರ್ಷ ಅತ್ಯಂತ ಸಾಂಪ್ರದಾಯಿಕವಾಗಿ ಆಚರಣೆ ಮಾಡುತ್ತಿರುವುದು ಊರಿನ ಹಿರಿಮೆಯಾಗಿದೆ ಮತ್ತು ಯುವ ಸಮುದಾಯ ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಶೇಷ ಮರಾಠಿ,ನಾಗಪ್ಪ ಮರಾಠಿ,ವಾಸುದೇವ ಮರಾಠಿ,ಚಂದ್ರ ಮರಾಠಿ ಹೊಸೂರು,ವಾಸು ಹೊಸೂರು,ದಯಾನಂದ ಮರಾಠಿ,ಮಹಾದೇವ ಮರಾಠಿ ಹೊಸೂರು,ಬಾಲರಾಜ್ ಮರಾಠಿ,ಹೊಸೂರಿನ ಗ್ರಾಮಸ್ಥರು ಹಾಗೂ ಸಿದ್ದೇಶ್ವರ ಹೋಳಿ ಸಮಿತಿ ಹೊಸೂರಿನ ಸರ್ವ ಸದಸ್ಯರು ಹಾಜರಿದ್ದರು.

ಚಿತ್ರ:ನಾಗಪ್ಪ ಮರಾಠಿ

Leave a Reply

Your email address will not be published. Required fields are marked *

16 − 4 =