ಬೈಂದೂರು; ಸುಮಾರು 72 ಕೋಟಿ ರೂಪಾಯಿ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಹೇರಂಜಾಲು ಗುಡೇ ದೇವಸ್ಥಾನ ಏತ ನೀರಾವರಿ ಯೋಜನೆಗಳ ಕುರಿತು ಕಳೆದ ಕೆಲವು ಸಮಯದಿಂದ ರೈತರ ವಿರೋಧ ಹಾಗೂ ಗೊಂದಲಗಳ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ.ಸ್ಥಳೀಯ ಸಮಸ್ಯೆಗಳ ಕುರಿತು ಮಾಹಿತಿ ಪಡೆಯಲು ರೈತರ ವಿಶ್ವಾಸ ಪಡೆದು ಜನರಿಗೆ ತೊಂದರೆಯಾಗದಂತೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು ಅವರು ಶನಿವಾರ ಗುಡೇ ದೇವಸ್ಥಾನ ಏತ ನೀರಾವರಿ ಯೋಜನೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಬೇಟಿ ನೀಡಿ ಮಾತನಾಡಿ ರೈತ ನಾಯಕರಾದ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಹಾಗೂ ಪ್ರತಾಪಚಂದ್ರ ಶೆಟ್ಟಿ ಯವರ ಜೊತೆ ಮಾತನಾಡಿದ್ದೇನೆ.ಸಾರ್ವಜನಿಕರಿಗೆ ತೊಂದರೆಯಾಗುವ ಅಂಶಗಳನ್ನು ಗಮನಿಸಿ ಸ್ಥಳೀಯರ ವಿಶ್ವಾಸ ಪಡೆದು ಕಾಮಗಾರಿ ಮುಂದುವರಿಯಲಿದೆ ಮತ್ತು ಬಳಕೆದಾರರ ಸಂಘ ಸ್ಥಾಪಿಸಿ ಸ್ಥಳೀಯರಿಗೆ ಜವಬ್ದಾರಿ ನೀಡಿ ನಿಯಮಗಳನ್ನು ಮತ್ತು ಸ್ಥಳೀಯರ ನಡುವೆ ಸಮನ್ವಯತೆ ಮೂಲಕ ಗುಡೇ ದೇವಸ್ಥಾನ ಏತ ನೀರಾವರಿ ಯೋಜನೆ ಪೂರ್ಣಗೊಳ್ಳಲಿದೆ ಎಂದರು.






ಈ ಸಂದರ್ಭದಲ್ಲಿ ಹಿರಿಯ ರೈತರಾದ ಮಾಲಿಂಗ ಪೂಜಾರಿ,ಖಂಬದಕೋಣೆ ಗ್ರಾ.ಪಂ ಮಾಜಿ ಅಧ್ಯಕ್ಷ ಸುಕೇಶ ಶೆಟ್ಟಿ,ರಮೇಶ ದೇವಾಡಿಗ,ಮಾಚ ಪೂಜಾರಿ,ರಾಜು ಗಾಣಿಗ ಹಾಗೂ ನೂರಾರು ಸ್ಥಳೀಯ ರೈತರು ಹಾಜರಿದ್ದರು.