ಶಿರೂರು; ಕುಂಭಮೇಳ ಯಾತ್ರೆಗೆ ತೆರಳಿದ ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಶಿರೂರು ಗ್ರಾಮದ ಅಳ್ವೆಗದ್ದೆ ನಿವಾಸಿ ಶ್ರೀಧರ ಮೊಗೇರ (50) ಕಾಣೆಯಾಗಿದ್ದಾರೆ.ಶಿರೂರಿನಿಂದ ಫೆ. 22 ರಂದು ಒಟ್ಟು 30 ಜನರು ಕಾಶಿ ,ಪ್ರಯಾಗ್‌ರಾಜ್ ,ಅಯೋಧ್ಯ ಯಾತ್ರೆಗೆ ತೆರಳಿದ್ದರು.ಕಾಶಿ ಯಾತ್ರೆ ಮುಗಿಸಿ ಬೆಳಿಗ್ಗೆ ಪ್ರಯಾಗ್‌ರಾಜ್ ವಾಹನ ಪಾರ್ಕಿಂಗ್ ಬಳಿ ಇದ್ದಕ್ಕಿದ್ದ ಹಾಗೇ ಶ್ರೀಧರ ಮೊಗೇರ್ ನಾಪತ್ತೆಯಾಗಿದ್ದಾರೆ.ಕಳೆದ ಮೂರು ದಿನಗಳಿಂದ ಹುಡುಕಿದರು ಇಲ್ಲಿಯವರೆಗು ಪತ್ತೆಯಾಗಿಲ್ಲ. ಪ್ರಯಾಗ್‌ರಾಜ್ ಪೊಲೀಸರಿಗೆ ದೂರು ನೀಡಲಾಗಿದೆ.ಒಂದೆರಡು ಬಾರಿ ಮೊಬೈಲ್ ಕರೆ ಸ್ವೀಕರಿಸಿದ್ದು ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿದೆ.ಸ್ಥಳೀಯರು,ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಾಪತ್ತೆಯಾದ ವ್ಯಕ್ತಿಯ ಹುಡುಕಾಟ ನಡೆಯುತ್ತಿದೆ.