ಶಿರೂರು: ಜೆಸಿಐ ಶಿರೂರು ಇದರ ೨೦೨೫ನೇ ಸಾಲಿನ ಪದಪ್ರಧಾನ ಕಾರ್ಯಕ್ರಮ ಎಮ್.ಎಮ್ ರೇಸಾರ್ಟ್ ಗೋರ್ಟೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಜೆಸಿಐ ೧೫ರ ವಲಯಾಧ್ಯಕ್ಷ ಅಭಿಲಾಶ್ ಬಿ ಎ ಪದಪ್ರಧಾನ ಸಮಾರಂಭ ನೆರವೇರಿಸಿದರು. ವೇದಿಕೆಯಲ್ಲಿ ವಲಯ ಉಪಾಧ್ಯಕ್ಷ ಅನ್ವೇಶ್ ಶೆಟ್ಟಿ, ಉದ್ಯಮಿ ಮಣಿಗಾರ್ ಜಿಪ್ರಿ ಸಾಹೇಬ್, ಉದ್ಯಮಿ ರಘುರಾಮ ಕೆ.ಪೂಜಾರಿ, ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಮೋಹನ್ ರೇವಣಕರ್, ಪಾಂಡುರಂಗ ಅಳ್ವೆಗದ್ದೆ, ವಲಯಾಧಿಕಾರಿ ನಾಗೇಂದ್ರ ಪ್ರಭು, ನಿಕಟಪೂರ್ವಾಧ್ಯಕ್ಷ ಸತೀಶ್ ಕೊಠಾರಿ, ಕಾರ್ಯದರ್ಶಿ ವಿನೋದ್ ಮೇಸ್ತ, ಜೇಸಿರೇಟ್ ಅಧ್ಯಕ್ಷೆ ಲತಾ ಪೂಜಾರಿ,ಜೂನಿಯರ್ ಜೆಸಿ ಅಧ್ಯಕ್ಷ ಪವನ್ ಪೂಜಾರಿ ಉಪಸ್ಥಿತರಿದ್ದರು.

ನೂತನ ಅಧ್ಯಕ್ಷರಾಗಿ ಜಯಂತ ಪೂಜಾರಿ ಅಧಿಕಾರ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಮೀನುಗಾರ ಮಂಜುನಾಥ ಮೊಗೇರ್ ಅಳ್ವೆಗದ್ದೆ ಹಾಗೂ ಕೃಷಿಕರಾದ ತಿಮ್ಮಪ್ಪ ಪೂಜಾರಿಯವರನ್ನು ಸನ್ಮಾನಿಸಲಾಯಿತು.