ಶಿರೂರು: ಶಿರೂರು ಕರಾವಳಿಯ ನಾಗಶ್ರೀ ಭಜನಾ ಮಂಡಳಿ ಅಪರೂಪದ ಕಾರ್ಯಕ್ರಮ ಸಾಕ್ಷಿಯಾಗಿತ್ತು.35ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಅಂತರ್ ಜಿಲ್ಲಾ ಮಟ್ಟದ ಆಹ್ವಾನಿತ ಭಜನಾ ತಂಡಗಳ ಭಜನಾ ಸ್ಪರ್ಧೆ ಭಕ್ತಾಭಿಮಾನಿಗಳನ್ನು ಭಕ್ತಿಸುಧೆಯಲ್ಲಿ ತೇಲಿಸಿತ್ತು.ಅತ್ಯಂತ ಪ್ರತಿಷ್ಠಿತ ತಂಡಗಳ ಸುಶ್ರಾವ್ಯ ಭಜನೆ ಒಂದಕ್ಕಿಂತ ಒಂದು ಮೆಚ್ಚುಗೆ ಗಳಿಸಿತ್ತು.ಸುಮಾರು 8 ಭಜನಾ ತಂಡಗಳು ಆಗಮಿಸಿದ್ದು ಆರು ಗಂಟೆಗೂ ಅಧಿಕ ಭಜನಾ ಸ್ಪರ್ಧೆ ಮುಂಜಾನೆಯ ವರೆಗೆ ಭಜನಾ ಪ್ರಿಯರನ್ನು ಹಿಡಿದಿರಿಸಿತ್ತು.
ಭಜನಾ ಸ್ಪರ್ಧೆಯ ನಿರ್ಣಯಕರಾಗಿ ರವಿಶಂಕರ ಹೆಬ್ಬಾರ್, ಮೂಕಾಂಬಿಕಾ ಉಡುಪ,ನಾಗಶ್ವೇತಾ ಹೆಬ್ಬಾರ್ ನಿರ್ಣಾಯಕರಾಗಿ ಆಗಮಸಿದ್ದರು.ನಾಗಶ್ರೀ ಭಜನಾ ಮಂಡಳಿ ಕರಾವಳಿ ಅಧ್ಯಕ್ಷ ನಾರಾಯಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ ಅತ್ಯಂತ ಅಪರೂಪವಾಗಿ ಭಜನೆಯಲ್ಲೂ ಸ್ಪರ್ಧೆ ಮೂಲಕ ವಿಭಿನ್ನವಾಗಿ ಆಯೋಜಿಸಿರುವುದು ಯುವ ಸಮುದಾಯಕ್ಕೆ ಧಾರ್ಮಿಕತೆಯ ಆಸಕ್ತಿ ಹೆಚ್ಚಿಸಿದೆ ಮತ್ತು ಉತ್ತಮ ಸಂಯೋಜನೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ,ವಿವಿಧ ಮುಖಂಡರು,ಭಜನಾ ಸಮಿತಿಯ ಸರ್ವ ಸದಸ್ಯರು ಹಾಗೂ ಊರಿನ ಪ್ರಮುಖರು ಹಾಜರಿದ್ದರು.

ಕಾರ್ಯದರ್ಶಿ ಯೋಗೇಶ್ ಪೂಜಾರಿ ಸ್ವಾಗತಿಸಿದರು.ದೈಹಿಕ ಶಿಕ್ಷಕ ಗುರುರಾಜ್ ಎಸ್ ಕಾರ್ಯಕ್ರಮ ನಿರೂಪಿಸಿದರು.ಕೃಷ್ಣ ಬಿ.ಪಿ ವಂದಿಸಿದರು.
ವಂದಿಸಿದರು. ಭಜನಾ ಸ್ಪರ್ಧೆಯಲ್ಲಿ ಪುತ್ತೂರಿನ ಗಾನ ಸಿರಿ ತಂಡ ಪ್ರಥಮ ಸ್ಥಾನ ಪಡೆದರು.ಸರ್ವಶ್ವರಿ ಭಜನಾ ಮಂಡಳಿ ಹೊನ್ನಾವರ ದ್ವಿತೀಯ ಸ್ಥಾನ ಪಡೆದರು.ಗಾನಸುರಭಿ ಮಲ್ಪೆ ತೃತೀಯ ಸ್ಥಾನ ಪಡೆದರು ಹಾಗೂ ಶಿವರಂಜಿನಿ ಸುರತ್ಕಲ್ ಚತುರ್ಥ ಸ್ಥಾನ ಪಡೆದರು.
ವರದಿ/ಗಿರಿ ಶಿರೂರು