ಬೈಂದೂರು; ಸಮೃದ್ದ ಬೈಂದೂರು ಸಂಸ್ಥೆಯ ಮೂಲಕ ಕ್ಷೇತ್ರದ ಬಹುತೇಕ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವ ಜೊತೆಗೆ ಶಿಕ್ಷಣ,ಆರೋಗ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ದಾನಿಗಳ ನೆರವಿನಿಂದ ಅತ್ಯುತ್ತಮ ಕಾರ್ಯ ನಡೆಯುತ್ತಿದೆ.ಸ್ವಯಂಸ್ಪೂರ್ತಿ ಫೌಂಡೇಶನ್ ಬೆಂಗಳೂರು ಸಂಸ್ಥೆ ಬೈಂದೂರು ಕ್ಷೇತ್ರದ ಗ್ರಾಮೀಣ ಭಾಗದ ಶಾಲೆಗಳನ್ನು ಗುರುತಿಸಿ ನೀಡುತ್ತಿರುವ ಕೊಡುಗೆ ನೂರಾರು ಬಡ ವಿದ್ಯಾರ್ಥಿಗಳಿಗೆ ಮತ್ತು ಕ್ಷೇತ್ರದ ಗೌರವವನ್ನು ಹೆಚ್ಚಿಸಿದೆ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಲ್ಲಿ ಬಾರು ಶಾಲೆಗೆ ಸಮೃದ್ಧ ಬೈಂದೂರು ಯೋಜನೆಯಡಿ ಸ್ವಯಂ ಸ್ಪೂರ್ತಿ ಫೌಂಡೇಶನ್ ಬೆಂಗಳೂರು ಇದರ ವತಿಯಿಂದ 4 ಕಂಪ್ಯೂಟರ್ ಮತ್ತು 4 ಕಂಪ್ಯೂಟರ್ ಟೇಬಲ್ ಮತ್ತು 4 ಕುರ್ಚಿ ಸುಮಾರು 2,50,000 ರೂಪಾಯಿ ಶಾಲೆಗೆ ಹಸ್ತಾಂತರಿಸಿ ಈ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಸ್ವಯಂಸ್ಪೂರ್ತಿ ಫೌಂಡೇಶನ್ ಬೆಂಗಳೂರು ಅಧ್ಯಕ್ಷ ನಾಗರಾಜ ಶೆಟ್ಟಿ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ,ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ದಯಾನಂದ ಮರಾಠಿ,ನಿಕಟಪೂರ್ವ ನಾಗಪ್ಪ ಮರಾಠಿ ಉಪಾಧ್ಯಕ್ಷೆ ಸುಮತಿ ಗಣೇಶ ಆಚಾರ್, ದಾನಿಗಳಾದ ಕೆ.ಎಸ್ . ಮ್ಯಾಥ್ಯೂ ನಂದರಗದ್ದೆ, ಶಾಲಾ ಎಸ್.ಡಿ.ಎಮ್.ಸಿ ಸದಸ್ಯರು ಮತ್ತು ಊರಿನ ಸಮಸ್ತ ಶಿಕ್ಷಣ ಅಭಿಮಾನಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಸ್ವಯಂಸ್ಪೂರ್ತಿ ಫೌಂಡೇಶನ್ ಬೆಂಗಳೂರು ಅಧ್ಯಕ್ಷ ನಾಗರಾಜ ಶೆಟ್ಟಿ ಹಾಗೂ ಓಲಂಪಿಯಡ್ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಸ.ಹಿ.ಪ್ರಾ.ಶಾಲೆ ಮುಲ್ಲಿಬಾರು ವಿದ್ಯಾರ್ಥಿನಿ ವಂಶಿಕಾ ಮರಾಠಿ ಯವರನ್ನು ಸಮ್ಮಾನಿಸಲಾಯಿತು.

ಶಾಲಾ ಮುಖ್ಯ ಶಿಕ್ಷಕ ಮಹಾಬಲೇಶ್ವರ ಎಸ್ ಸ್ವಾಗತಿಸಿದರು.ಸಹ ಶಿಕ್ಷಕ ಶ್ರೀ ಸುಧಾಕರ ಪಿ. ಬೈಂದೂರು ಕಾರ್ಯಕ್ರಮ ನಿರೂಪಿಸಿದರು.ವಿನಾಯಕ ಪಟಗಾರ್ ವಂದಿಸಿದರು.
ವರದಿ/ಗಿರಿ ಶಿರೂರು