ಬೈಂದೂರು; ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಪ್ರಗತಿಯಿಂದ ಸುಸಜ್ಜಿತ ಸಮಾಜ ನಿರ್ಮಾಣ್ಯ ಸಾದ್ಯ.ಪ್ರತಿ ಊರಿನಲ್ಲೂ ಕನ್ನಡ ಶಾಲೆಗಳು ನೂರಾರು ಪ್ರತಿಭಾವಂತರನ್ನು ಸಮಾಜಕ್ಕೆ ನೀಡಿದೆ.ಬದಲಾದ ವ್ಯವಸ್ಥೆಯಲ್ಲಿ ಸರಕಾರಿ ಶಾಲೆಗಳು ಯುವ ತಲೆಮಾರುಗಳಿಂದ ದೂರವಾಗುತ್ತಿರುವುದು ಆತಂಕದ ವಿಷಯವಾದರು ಸಹ ಸಾರ್ವಜನಿಕರ ಸಹಕರಾವಿದ್ದಾಗ ಸರಕಾರ ಶಾಲೆಯ ಅಭಿವೃದ್ದಿ ಸಾಧ್ಯ.ಸರಕಾರಿ ಶಾಲೆ ಅಭಿವೃದ್ದಿಯಾದರೆ ಸಾಮಾನ್ಯ ಬಡವನ ಮಗುವೂ ಕೂಡ ಶಿಕ್ಷಣ ಪಡೆಯಲು ಸಾಧ್ಯ.ಹೀಗಾಗಿ ಇದು ಊರಿನ ಪ್ರಗತಿಯ ಸಂಕೇತ ಎಂದು ಉಡುಪಿ -ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು ಅವರು ಸ.ಹಿ.ಪ್ರಾ.ಶಾಲೆ ಯಳಜಿತ್ ಇದರ ಶಾಲಾ ಶತಮಾನೋತ್ಸವದ ನೂತನ ರಂಗ ಮಂದಿರವನ್ನು ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ರಮಣಶ್ರೀ ಪ್ರತಿಷ್ಠಾನ ಬೆಂಗಳೂರು ಇದರ ಅಧ್ಯಕ್ಷ ನಾಡೋಜ ಎಸ್.ಷಡಕ್ಷರಿ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಬದುಕಿನಲ್ಲಿ ನಾವೇನು ಸಾಧಿಸಿದ್ದೇವೆ ಅನ್ನೋದು ಮುಖ್ಯವಲ್ಲ.ಈ ಸಮಾಜಕ್ಕೆ ನಾವೇನು ನೀಡಿದ್ದೇವೆ ಎನ್ನುವ ಅರಿವು ಹೊಂದಬೇಕು.ನಾವು ಉತ್ತಮವಾಗಿದ್ದೆರೆ ಜಗತ್ತು ಅತ್ಯುತ್ತಮವಾಗಿರುತ್ತದೆ.ಪ್ರೀತಿ ಸಹಕಾರದ ಬದುಕು ಮಾತ್ರ ಜೀವನದ ಉತ್ಸಾಹವಾಗಿರುತ್ತದೆ.ನೂರು ವರ್ಷದ ನೆನಪಿಗೆ ಕನ್ನಡ ಶಾಲೆಯನ್ನು ಊರಿನ ಸಂಭ್ರಮವಾಗಿ ಆಚರಿಸುತ್ತಿರುವುದು ಇತರ ಭಾಗಕ್ಕೆ ಮಾದರಿಯಾಗಿದೆ ಎಂದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು.ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ನೂತನ ಶಾಲಾ ವಾಹನಕ್ಕೆ ಚಾಲನೆ ನೀಡಿದರು.




ಮುಖ್ಯ ಅತಿಥಿಗಳಾಗಿ ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಚಂದನ ಬಿಲ್ಲವ,ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ,ಬೈಂದೂರು ವಲಯ ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಶೇಖರ ಪೂಜಾರಿ,ಗೋಳಿಹೊಳೆ ಗ್ರಾ.ಪಂ ಮಾಜಿ ಅಧ್ಯಕ್ಷ ಮಂಜಯ್ಯ ಪೂಜಾರಿ,ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ರವಿಚಂದ್ರ ಶೆಟ್ಟಿ,ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜೇಂದ್ರ ಶೆಟ್ಟಿ,ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ರಮೇಶ ಪೂಜಾರಿ,ಕಾರ್ಯಾಧ್ಯಕ್ಷ ಮಂಜಯ್ಯ ಪೂಜಾರಿ,ವಿದ್ಯಾರ್ಥಿ ನಾಯಕ ಓಂ ಗಣೇಶ್,ನಾಯಕಿ ಪ್ರಜ್ಞಾ ಉಪಸ್ಥಿತರಿದ್ದರು.
ಶತಮಾನೋತ್ಸವ ಸಮಿತಿ ಅಧ್ಯಕ್ಷ ಮಂಗೇಶ್ ಶ್ಯಾನುಭಾಗ್ ಸ್ವಾಗತಿಸಿದರು.ಸಹಶಿಕ್ಷಕ ಸದಾಶಿವ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಬೈಂದೂರು ವಲಯ ಅರಣ್ಯಾಧಿಕಾರಿ ಸಂದೇಶ ಕುಮಾರ್ ಸ್ವಸ್ತಿವಾಚನಗೈದರು.ಶಾಲಾ ಮುಖ್ಯ ಶಿಕ್ಷಕಿ ಪದ್ಮಾವತಿ ಶಾಲಾ ವರದಿ ವಾಚಿಸಿದರು.ಶಿಕ್ಷಕ ಉದಯ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.ಗಣಪತಿ ಗೌಡ ವಂದಿಸಿದರು.
ವರದಿ/ಗಿರಿ ಶಿರೂರು