ಶಿರೂರು; ಶಾರ್ಟ್ ಸೆರ್ಕ್ಯೂಟ್‌ನಿಂದ ಮನೆಗೆ ಬೆಂಕಿ ತಗುಲಿದ ಘಟನೆ ಶಿರೂರು ಗ್ರಾಮದ ಅಳ್ವೆಗದ್ದೆಯಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.ಇಲ್ಲಿನ ಅಳ್ವೆಗದ್ದೆ ಪ್ರಭಾಕರ ಮೇಸ್ತ ರವರ ಮನೆಯ ಹಿಂಭಾಗದ ಕೊಠಡಿಯಲ್ಲಿ ಮಂಗಳವಾರ ಮುಂಜಾನೆ ಶಾರ್ಟ್ ಸೆರ್ಕ್ಯೂಟ್ ನಿಂದ ಬೆಂಕಿ ತಗುಲಿ ಮನೆಯ ಹಿಂಭಾಗ ಭಾಗಶಃ ಸುಟ್ಟುಹೋಗಿದೆ ಅಗ್ನಿಶಾಮಕ ದಳದ ಕಾರ್ಯಾಚರಣೆ ಮೂಲಕ ಬೆಂಕಿ ನಂದಿಸಿದೆ.ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ,ಪೊಲೀಸ್ ಇಲಾಖೆ,ಗ್ರಾಮ ಪಂಚಾಯತ್ ಅಧಿಕಾರಿಗಳು ಬೇಟಿ ನೀಡಿದ್ದಾರೆ.
