ಬ್ರಹ್ಮಾವರ : ಕ್ಷಯ ಮುಕ್ತ ಉಡುಪಿಯ ಮೊದಲ ಹೆಜ್ಜೆಯಾಗಿ, ಜಿಲ್ಲೆಯ ನೂರು ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣಾ ನಿಮಿತ್ತ ನಡೆಯುವ ಆರೋಗ್ಯ ಇಲಾಖೆಯ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಕೂಟ ಎನ್.ಟಿ.ಇ.ಪಿ ಸ್ವಾಸ್ಥ್ಯ ಟ್ರೋಪಿ -2025 ಜ.24,25 ಹಾಗೂ 26 ರಂದು ಎಸ್.ಎಂ.ಎಸ್ ಕಾಲೇಜು ಮೈದಾನ ಬ್ರಹ್ಮಾವರದಲ್ಲಿ ನಡೆಯಲಿದೆ.ಪ್ರಥಮ ಬಹುಮಾನ 33,333 ಹಾಗೂ ದ್ವಿತೀಯ ಬಹುಮಾನ 22,222 ಶಾಶ್ವತ ಫಲಕ ದೊರೆಯಲಿದೆ ಎಂದು ಜಿಲ್ಲಾ ಅಧ್ಯಕ್ಷ ಆಲಂದೂರು ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
