ಬೈಂದೂರು: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಬೈಂದೂರು ತಾಲೂಕು ಘಟಕದ ಅಧ್ಯಕ್ಷರಾಗಿ ಶಮ್ ತಬ್ರೇಝ್ ನಾಗೂರು ಮತ್ತು ಕಾರ್ಯದರ್ಶಿಯಾಗಿ ತುಫೈಲ್ ಶಹಾಬುದ್ದೀನ್ ಬೈಂದೂರು ಆಯ್ಕೆ ಯಾಗಿದ್ದಾರೆ.ಬೈಂದೂರು ತಾಲೂಕು ಘಟಕದ ಚುನಾವಣೆಯಲ್ಲಿ 2024-26ನೇ ಸಾಲಿಗೆ ಈ ಆಯ್ಕೆ ನಡೆಯಿತು.ಉಪಾಧ್ಯಕ್ಷರಾಗಿ ಖುರ್ಷಿದ್ ಹಬೀಬುಲ್ಲಾ ಬೈಂದೂರು, ಜೊತೆ ಕಾರ್ಯದರ್ಶಿಯಾಗಿ ಝನುಲ್ ಆಬಿದೀನ್ ಹಳಗೇರಿ, ಕೋಶಾಧಿಕಾರಿಯಾಗಿ ಸಯ್ಯದ್ ಅಜ್ಜಲ್ ಶಿರೂರು ಆಯ್ಕೆಯಾದರು.ತಾಲೂಕು ಸಮಿತಿಯ ಸದಸ್ಯರಾಗಿ ಶೇಖ್ ಫಯಾಝ್ ಅಲಿ, ’ಮುಹಮ್ಮದ್ ಸಿರಾಜ್, ಪಟಗಾರ್ ಶಕೀಲ್, ಶಬೀರ್ ಬೈಂದೂರು, ಅಮೀನ್ ಗೋಳಿ ಹೊಳೆ, ಆಫ್ಲಾಬ್ ಕಿರಿಮಂಜೇಶ್ವರ, ಮುಹಮ್ಮದ್ ಆಶ್ರಫ್ ನಾಗೂರು, ಜಾಫರ್ ಸಾದಿಕ್ ಬೈಂದೂರು, ಶೋಯಬ್ ಅರೆಹೊಳೆ ಶಿರೂರು ಮತ್ತು ಕಾಪ್ಸಿ ಮುಹಮ್ಮದ್ ಶಿರೂರು ಆಯ್ಕೆಯಾದರು.ಎಚ್.ಎಸ್.ಸಿದ್ದೀಕ್ ಶಿರೂರು, ಶೇಖ ಹಬೀಬುಲ್ಲಾ ಶಿರೂರು, ಅಬ್ದುಲ್ ಖಾದರ್ ಬೈಂದೂರು, ಮುಸ್ತಫಾ ಬಡಾಕೆರೆ ಮತ್ತು ನೌಷಾದ್ ನಾವುಂದ ತಾಲೂಕು ಸಮಿತಿ ಸದಸ್ಯರಾಗಿ ಆಯ್ಕೆಯಾದರು.