ಬೈಂದೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಗಾನಾಡು ಇದರ ವಾರ್ಷಿಕ ಕ್ರೀಡಾಕೂಟ ಶಾಲಾ ಮೈದಾನದಲ್ಲಿ ನಡೆಯಿತು.ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂರ್ಡಾಕರ್ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ.ಮಕ್ಕಳನ್ನು ಕೇವಲ ಪಠ್ಯಪುಸ್ತಕಕ್ಕೆ ಸೀಮಿತ ಮಾಡದೇ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹ ನೀಡಬೇಕಿದೆ.ಮಕ್ಕಳ ದೈಹಿಕ ಬೆಳವಣಿಗೆಗೆ ಕ್ರೀಡೆ ಅತೀ ಅವಶ್ಯ.ಶಾಲಾ ಹಂತದಲ್ಲೇ ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಉತ್ತಮ ಭವಿಷ್ಯ ಸಾಧ್ಯ ಎಂದರು.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ  ದ್ವಜಾರೋಹಣ ನೆರವೇರಿಸಿದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜು ದೇವಪ್ಪನಡಿ ಅಧ್ಯಕ್ಷತೆ ವಹಿಸಿದ್ದರು.ಪ್ರೆಸಿಡೆಂಟ್ ಆಫ್ ಉಡುಪಿ ಚೇಂಬರ್ ಆಫ್ ಕಾಮರ್ಸ್‌ನ ಪ್ರಭಾಕರ ನಾಯಕ್ ಹೆಮ್ಮುಂಜೆ  ಕ್ರೀಡಾ ಜ್ಯೋತಿ ಬೆಳಗಿಸಿದರು.

ಮುಖ್ಯ ಅತಿಥಿಗಳಾಗಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಜಯ ಕುಮಾರ್ ಶೆಟ್ಟಿ, ಬೈಂದೂರು ಆರಕ್ಷಕ ಠಾಣೆಯ ನವೀನ ಬೋರ್ಕರ್,ಶಿಕ್ಷಣ ಸಂಯೋಜಕ ಚಂದ್ರ ದೇವಾಡಿಗ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಭಾಗೀರಥಿ ಮರಾಠಿ ಗಂಗಾನಾಡು,ದಾನಿಗಳಾದ ನಾಗವೇಣಿ ನಾರಾಯಣ ಶೇರುಗಾರ್ ಗಂಗಾನಾಡು, ರಮೇಶ ಪರಮಯ್ಯಗೊಂಡ ಕ್ಯಾರ್ತುರು,ಪೊಲೀಸ್ ಇಲಾಖೆಯ ಚಂದ್ರ ಮರಾಠಿ,ದೇವಪ್ಪ ಹಂಡೆ ಗಂಗಾನಾಡು,ಪ್ರಭಾರ ಸಿ.ಆರ್.ಪಿ ಚಂದ್ರ ನಾರಾಯಣ ಬಿಲ್ಲವ,ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರಾಜು ಬಿ.ಮಾಜಿ ಅಧ್ಯಕ್ಷ ಗಣಪ ಜಿ.ಮರಾಠಿ,ಸುಭಾಷ್ ಚಂದ್ರ,ತೀರ್ಥ ಕುಮಾರಿ, ಶಿಕ್ಷಕಿ ಹೇಮಲತಾ, ಶಿಕ್ಷಕರಾದ ರಾಘವೇಂದ್ರ ಕೆ. ಎಸ್, ಗೌರವ ಶಿಕ್ಷಕಿ ಜ್ಯೋತಿ,ಅಂಬಿಕಾ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಪ್ರಭಾಕರ್ ಬಿಲ್ಲವ ಸ್ವಾಗತಿಸಿದರು.ಶಿಕ್ಷಕಿ ಶಾರದ ಕಾರ್ಯಕ್ರಮ ನಿರೂಪಿಸಿದರು.ದೈಹಿಕ ಶಿಕ್ಷಣ ಶಿಕ್ಷಕಿ ಗೌರಿ ಎಸ್.ವಂದಿಸಿದರು.

 

 

 

 

 

 

 

 

 

 

Leave a Reply

Your email address will not be published. Required fields are marked *

nineteen + nine =