ಬೈಂದೂರು: ಜೆಸಿಐ ಉಪ್ಪುಂದ ಇದರ 2025 ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಡಿ.24 ರಂದು ಸಂಜೆ 6:30ಕ್ಕೆ ಮಾತೃಶ್ರೀ ಸಭಾ ಭವನ ಶಾಲೆಬಾಗಿಲು ಉಪ್ಪುಂದದಲ್ಲಿ ನಡೆಯಲಿದೆ.
ಮುಖ್ಯಅತಿಥಿಗಳಾಗಿ ಸುಮುಖ ಗ್ರೂಪ್ ಸಂಸ್ಥೆಯ ಬಿ.ಎಸ್.ಸುರೇಶ ಶೆಟ್ಟಿ,ವಲಯಾಧ್ಯಕ್ಷ ಅಭಿಲಾಷ ಬಿ.ಎ,ಬೈಂದೂರು ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶೇಖರ ಪೂಜಾರಿ,ಸ್ಥಾಪಕಾಧ್ಯಕ್ಷ ದಿವಾಕರ ಶೆಟ್ಟಿ,ವಲಯ ಉಪಾಧ್ಯಕ್ಷೆ ಅಶ್ವಿನಿ ಐತಾಳ,ಜೆಸಿಐ ಅಧ್ಯಕ್ಷ ಮಂಜುನಾಥ ದೇವಾಡಿಗ,ಕಾರ್ಯದರ್ಶಿ ನರಸಿಂಹ ದೇವಾಡಿಗ ಆಗಮಿಸಲಿದ್ದಾರೆ ಎಂದು ಜೆಸಿಐ ಉಪ್ಪುಂದ ಸಂಸ್ಥೆಯ 2025ನೇ ಸಾಲಿನ ನೂತನ ಅಧ್ಯಕ್ಷರಾದ ಭರತ್ ದೇವಾಡಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.