ಶಿರೂರು: ದಿನ್ನಾ ಪ್ರೆಂಡ್ಸ್ ಕ್ರಿಕೆಟರ್‍ಸ್ ಶಿರೂರು ಹಾಗೂ ಗ್ರಾ.ಪಂ ಸದಸ್ಯರಾದ ಉದಯ ಪೂಜಾರಿ ಇವರ ನೇತ್ರತ್ವದಲ್ಲಿ 6ನೇ ವರ್ಷದ ಹೊನಲು ಬೆಳಕಿನ 30 ಗಜಗಳ ಐ.ಪಿ.ಎಲ್ ಮಾದರಿಯ ಕ್ರಿಕೆಟ್ ಪಂದ್ಯಾಟ ಶ್ರೀ ಬ್ರಹ್ಮಲಿಂಗೇಶ್ವರ ಟ್ರೋಪಿ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನ ಶಿರೂರಿನಲ್ಲಿ ನಡೆಯಿತು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ ಕ್ರೀಡೆ ಯುವ ಸಮುದಾಯದ ಸಂಘಟನೆಯ ಜೊತೆಗೆ ಸಾಮರಸ್ಯವನ್ನು ಬೆಳೆಸುತ್ತದೆ.ಪ್ರತಿಭಾವಂತ ಕ್ರೀಡಾಳುಗಳಿಗೆ ವಿಪುಲ ಅವಕಾಶಗಳಿವೆ.ಗ್ರಾಮೀಣ ಭಾಗವಾದ ಶಿರೂರಿನಲ್ಲಿ ಯುವ ಮುಂದಾಳು ಉದಯ ಪೂಜಾರಿ ನೇತ್ರತ್ವದಲ್ಲಿ ಹಮ್ಮಿಕೊಂಡಿರುವ ಐ.ಪಿ.ಎಲ್. ಮಾದರಿಯ ಕ್ರಿಕೆಟ್ ಪಂದ್ಯಾಟ ಅತ್ಯಂತ ವಿಶೇಷ ಮತ್ತು ವಿಭಿನ್ನವಾಗಿ ಮೂಡಿಬಂದಿದೆ.ಮಾತ್ರವಲ್ಲದೆ ಹಲವು ಪ್ರತಿಭಾವಂತ ಕ್ರೀಡಾಳುಗಳಿಗೆ ಉತ್ತಮ ಅವಕಾಶ ದೊರಕಿದಂತಾಗಿದೆ ಎಂದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಮಾತನಾಡಿ ಕ್ರೀಡೆ ಕೇವಲ ಆಟಕ್ಕೆ ಮಾತ್ರ ಸೀಮಿತವಾಗದೇ ದೈಹಿಕ, ಮಾನಸಿಕ ಆರೋಗ್ಯವನ್ನು ಸದೃಡವಾಗಿಸುತ್ತದೆ.ಜೊತೆಗೆ ಶಿಸ್ತು ಮತ್ತು ಸಾಮರಸ್ಯ ಬೆಳೆಸುತ್ತದೆ.ಇಂತಹ ಅದ್ದೂರಿಯ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿದೆ ಎಂದರು.
ಯುವ ಮುಂದಾಳು ಉದಯ ಪೂಜಾರಿ ಮೈದಿನಪುರ ಅಧ್ಯಕ್ಷತೆ ವಹಿಸಿದ್ದರು.




ಶಿರೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ ಟ್ರೋಪಿ ಅನಾವರಣಗೊಳಿಸಿದರು.ಮುಖ್ಯ ಅತಿಥಿಗಳಾಗಿ ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಶಿರೂರು ಗ್ರಾ.ಪಂ ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್,ಯಕ್ಷ ಸಂಪದ ಅಧ್ಯಕ್ಷ ಚಿಕ್ಕು ಪೂಜಾರಿ,ಉದ್ಯಮಿ ರಘುರಾಮ ಕೆ.ಪೂಜಾರಿ,ಕೆ.ಡಿ.ಪಿ ಸದಸ್ಯ ಶೇಖರ ಪೂಜಾರಿ ಉಪ್ಪುಂದ,ಪತ್ರಕರ್ತ ಅರುಣ್ ಕುಮಾರ್ ಶಿರೂರು,ಲತಾ ಪೂಜಾರಿ,ನಾಗರಾಜ ಪೂಜಾರಿ,ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯರಾದ ನಾಗರಾಜ ಗಾಣಿಗ,ಸದಾಶಿವ ಡಿ.ಪಡುವರಿ,ಗ್ರಾ.ಪಂ ಸದಸ್ಯರಾದ ಪ್ರಸನ್ನ ಕುಮಾರ್ ಶೆಟ್ಟಿ,ಮುಕ್ರಿ ಅಲ್ತಾಫ್,ಮಹ್ಮದ್ ಗೌಸ್,ಶಕೀಲ್ ಅಹ್ಮದ್,ರವೀಂದ್ರ ಶೆಟ್ಟಿ ಪಟೇಲ್,ರವೀಂದ್ರ ಶೆಟ್ಟಿ ಆರ್‍ಮಕ್ಕಿ,ಉದಯ ಮಾಕೋಡಿ ಮೊದಲಾದವರು ಉಪಸ್ಥಿತರಿದ್ದರು.
ಗುರುರಾಜ್ ನೀರ್‍ಗದ್ದೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ದಿನಕರ ಶಿರೂರು ವಂದಿಸಿದರು.
News/Giri Shiruru