ಬೈಂದೂರು: ಬೈಂದೂರು ಭಾಗದ ಐತಿಹಾಸಿಕ ಪ್ರಸಿದ್ದ ತಗ್ಗರ್ಸೆ ಕಂಠದಮನೆ ಸಾಂಪ್ರದಾಯಿಕ ಕಂಬಳೋತ್ಸವ ಶುಕ್ರವಾರ ಅತ್ಯಂತ ಯಶಸ್ವಿಯಾಗಿ ನಡೆಯಿತು.ತಗ್ಗರ್ಸೆ ಕಂಠದಮನೆಯ ಟಿ.ನಾರಾಯಣ ಹೆಗ್ಡೆ ಕಂಬಳೋತ್ಸವಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ ಹಲವು ವರ್ಷಗಳಿಂದ ತಗ್ಗರ್ಸೆ ಕಂಬಳೋತ್ಸವ ಸಾರ್ವಜನಿಕರ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.ಸಾಂಪ್ರದಾಯಿಕ ಚೌಕಟ್ಟಿನಲ್ಲಿ ನಡೆಯುವ ಬೈಂದೂರು ಭಾಗದ ಅತ್ಯಂತ ದೊಡ್ಡ ಕಂಬಳ ಇದಾಗಿದ್ದು ಕೃಷಿಕರ ಸಮಾಗಮ ಮತ್ತು ಸಂಭ್ರಮ ಅತ್ಯಂತ ಸಂತಸ ನೀಡಿದೆ ಎಂದರು.
ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದು ಸುಮಾರು 35 ಜೋಡಿ ಕೋಣಗಳು ಕಂಬಳದಲ್ಲಿ ಭಾಗವಹಿಸಿದ್ದವು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ,ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ,ಜಿಲ್ಲಾ ಕಂಬಳ ಸಮಿತಿ ಗೌರವ ಸಲಹೆಗಾರ ಶಾಂತಾರಾಮ ಶೆಟ್ಟಿ ಬಾರ್ಕೂರು,ಪ್ರಣಯ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕಿಶೋರ ಸಸಿಹಿತ್ಲು ಸ್ವಾಗತಿಸಿದರು.ನಿತಿನ್ ಕಾರ್ಯಕ್ರಮ ನಿರೂಪಿಸಿದರು.ಗಣಪತಿ ಹೋಬಳಿದಾರ್ ವಂದಿಸಿದರು.
ತಗ್ಗರ್ಸೆ ಕಂಬಳೋತ್ಸವದ ಫಲಿತಾಂಶ.
ಹಲಗೆ ವಿಭಾಗ ಪ್ರಥಮ:ಚೈತ್ರ ಪರಮೇಶ್ವರ ಭಟ್ ಬೋಳಂಬಳ್ಳಿ
ದ್ವಿತೀಯ:ನೇರಳಕಟ್ಟೆ ಕೊಡ್ಲಾಡಿ
ಹಗ್ಗ ವಿಭಾಗ ಹಿರಿಯ
ಪ್ರಥಮ:ನೀಲಕಂಠ ಹುದಾರ್ ತಗ್ಗರ್ಸೆ ಬೈಂದೂರು
ಹಗ್ಗ ವಿಭಾಗ ದ್ವಿತೀಯ: ದಿ.ಕಾರಿಕಟ್ಟೆ ಮಹಾಬಲ ಶೆಟ್ಟಿ
ಹಗ್ಗ ವಿಭಾಗ ಕಿರಿಯ ಎ ಪ್ರಥಮ: ಶ್ರೀ ಸ್ವಾಮಿಧಾಮ ಹೊಳೆಕಟ್ಟು ಕುಂಬಾಶಿ
ದ್ವಿತೀಯ: ರವಿ ಪೂಜಾರಿ ಗುರಾಮಕ್ಕಿ
ಹಗ್ಗ ವಿಭಾಗ ಕಿರಿಯ ಬಿ ಪ್ರಥಮ: ಶ್ರೀ ಸ್ವಾಮಿಧಾಮ ಹೊಳೆಕಟ್ಟು ಕುಂಬಾಶಿ
ದ್ವಿತೀಯ: ಶ್ರೀ ಮಾಸ್ತಿಯಮ್ಮ ಮಾಸ್ತಿಕಟ್ಟೆ
News/Giri Shiruru