ಬೈಂದೂರು; ಬೈಂದೂರು ವಕೀಲರ ಸಂಘ (ರಿ.)ಬೈಂದೂರು ಇದರ ವತಿಯಿಂದ ವಕೀಲರ ದಿನಾಚರಣೆ ನಡೆಯಿತು.ಬೈಂದೂರು ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ವಿದ್ಯಾ ಎ.ಎಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಕೀಲರ ವೃತಿ ಶ್ರೇಷ್ಠವಾಗಿದ್ದು, ಸಮಾಜದಲ್ಲಿ ನೊಂದವರಿಗೆ ನ್ಯಾಯ ಒದಗಿಸುವುದು ಪುಣ್ಯ ಕೆಲಸವಾಗಿದೆ.ಜನತೆಗೆ ತ್ವರಿತ ಗತಿಯಲ್ಲಿ ನ್ಯಾಯ ಒದಗಿಸುವ ಅಗತ್ಯವಿದ್ದು ಇದಕ್ಕೆ ವಕೀಲರ ಸಹಕಾರ ಪ್ರಮುಖವಾಗಿದ್ದು ಈ ನಿಟ್ಟಿನಲ್ಲಿ ವಕೀಲರು ಕಾರ್ಯಪ್ರವೃತ್ತರಾಗಬೇಕು ಎಂದರು.
ಬೈಂದೂರು ವಕೀಲರ ಸಂಘದ ಅಧ್ಯಕ್ಷ ಮೋಬಿ ಪಿ.ಸಿ., ಅಧ್ಯಕ್ಷತೆ ವಹಿಸಿ ಮಾತನಾಡಿ, ವಕೀಲರು ತಮ್ಮ ಕಕ್ಷಿದಾರರಿಗೆ ನ್ಯಾಯ ಒದಗಿಸುವ ಜೊತೆಗೆ ಸಮಾಜದ ಸಮಸ್ಯೆಗಳಿಗೆ ಧ್ವನಿಯಾದಾಗ ವಕೀಲ ವ್ರತ್ತಿಗೆ ಇನ್ನಷ್ಟು ಮಹತ್ವ ಪಡೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ಬೈಂದೂರು ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಅಜಯ್ ಭಂಡಾರ್ಕರ್, ಬೈಂದೂರು ಸಹಾಯಕ ಸರಕಾರಿ ಅಭಿಯೋಜಕ ರಾಜಶೇಖರ ಪಿ., ಶ್ಯಾಮರಾವ್, ಬೈಂದೂರು ಪೊಲೀಸ್ ವ್ರತ್ತ ನಿರೀಕ್ಷಕ ಸವಿತ್ರತೇಜ್,ಪಿ.ಡಿ. ಚಂದ್ರಶೇಖರ್, ಹಾಗೂ ಬೈಂದೂರು ವಕೀಲರ ಸಂಘದ ಪದಾಽಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಬೈಂದೂರು ಸಹಾಯಕ ಸರಕಾರಿ ಅಭಿಯೋಜಕ ರಾಜಶೇಖರ ಪಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ನ್ಯಾಯವಾದಿ ಲಿಂಗಪ್ಪ ಮೇಸ್ತ ಸ್ವಾಗತಿಸಿದರು.ಬೈಂದೂರು ವಕೀಲರ ಸಂಘದ ಕಾರ್ಯದರ್ಶಿ ಪ್ರಶಾಂತ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ನ್ಯಾಯವಾದಿ ಚಿಕ್ಕಯ್ಯ ಶೆಟ್ಟಿ ವಂದಿಸಿದರು.