ಬೈಂದೂರು: ಜೀವನದಲ್ಲಿ ಹೋರಾಟ ಎನ್ನುವುದು ಪ್ರತಿಯೊಬ್ಬರ ಬದುಕನ್ನು ಬೆಳೆಸುತ್ತದೆ.ಬೆಳೆದ ಮೇಲೆ ನಡೆದು ಬಂದ ದಾರಿಯನ್ನು ಮರೆಯದಿರುವುದು ನೈಜ ಜೀವನ.ಉಳ್ಳವರು ನೂರಾರು ಜನ ಇದ್ದರು ಕೂಡ ಕಷ್ಟಕ್ಕೆ ಸ್ಪಂಧಿಸುವ ಹೃದಯವಂತವರು ಬೆರಳೆಣಿಕೆಯಷ್ಟು ಮಾತ್ರ.ಇನ್ನೊಬ್ಬರ ನೋವಿಗೆ ಸ್ಪಂಧಿಸುವ ನೆರವು ಭಗವಂತನಿಗೆ ಸೇವೆ ನೀಡಿದಂತೆ ಎಂದು ಶ್ರೀ ಕ್ಷೇತ್ರ ಕಾರ್ತಿಕೆಯ ಪೀಠ ಸಾರಂಗನಜಡ್ಡು ಹೊಸನಗರ ಯೋಗೀಂದ್ರ ಸ್ವಾಮೀಜಿ ಹೇಳಿದರು ಅವರು ಹೊಳೆತೋಟ ಗರಡಿ ಬಿಜೂರಿನಲ್ಲಿ ನಡೆದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ.) ಉಪ್ಪುಂದ ಇದರ 16 ನೇ ಶ್ರೀ ವರಲಕ್ಷ್ಮೀ ನಿಲಯದ ಪ್ರವೇಶೋತ್ಸವದ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ ಮಾತನಾಡಿ ಬೈಂದೂರುವ ಕ್ಷೇತ್ರ ಮಾತ್ರವಲ್ಲದೆ ರಾಜ್ಯದ ವಿವಿಧ ಕಡೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ಶೈಕ್ಷಣಿಕ, ಸಾಮಾಜಿಕ ,ಧಾರ್ಮಿಕ ಸೇವೆ ನಡೆಸುತ್ತಿದೆ.ನೂರಾರು ಬಡ ಕುಟುಂಬಗಳಿಗೆ ನೆರವು ನೀಡುವ ಜೊತೆಗೆ ಆಶಕ್ತರಿಗೆ ಸಹಕಾರ ಮುಂತಾದ ಸೇವೆ ನೀಡುತ್ತಿದೆ.ಇದುವರೆಗೆ ಒಟ್ಟು 16 ಮನೆಗಳನ್ನು ನಿರ್ಮಿಸಿದ್ದು ಮೂನ್ನೂರಕ್ಕೂ ಅಧಿಕ ಅರ್ಜಿಗಳು ಬಂದಿದೆ.ಮುಂದಿನ ದಿನದಲ್ಲಿ ಟ್ರಸ್ಟ್ ಮೂಲಕ ಇನ್ನಷ್ಟು ಜನಪರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಿ.ಎಸ್.ಪ್ರಕಾಶ್ ನಿವೃತ್ತ ಮುಖ್ಯ ಶಿಕ್ಷಕ ವಿಶ್ವೇಶ್ವರ ಅಡಿಗ,ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಸಮೃದ್ದ ಜನಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುರೇಶ್ ಶೆಟ್ಟಿ ಉಪ್ಪುಂದ,ಜಿ.ಪಂ ಮಾಜಿ ಸದಸ್ಯೆ ಗೌರಿ ದೇವಾಡಿಗ,ಮಾಜಿ ಜಿ.ಪಂ ಸದಸ್ಯೆ ಗೀತಾಂಜಲಿ ಸುವರ್ಣ ಉಪಸ್ಥಿತರಿದ್ದರು.
ಶಿಕ್ಷಕ ಸುಬ್ರಹ್ಮಣ್ಯ ಜಿ.ಉಪ್ಪುಂದ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ನಾಗರಾಜ ಪಿ.ಯಡ್ತರೆ ವಂದಿಸಿದರು.
ವರದಿ/ಚಿತ್ರ: ಗಿರಿ ಶಿರೂರು