ಶಿರೂರು: ಶಿರೂರು ಹಿರಿಯ ನಾಗರಿಕರ ವೇದಿಕೆ ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪೇಟೆ ಶ್ರೀ ವೆಂಕಟರಮಣ ಸಭಾ ಭವನದಲ್ಲಿ ನಡೆಯಿತು.ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ಹೆಚ್ ಆಯ್ಕೆಯಾದರು.ಉಪಾಧ್ಯಕ್ಷರಾಗಿ ಎಸ್. ಪ್ರಕಾಶ ಪ್ರಭು, ಹುಂಚನಿ ಕೃಷ್ಣಪ್ಪ ಶೆಟ್ಟಿ, ಕಾರ್ಯದರ್ಶಿ ಶಾಂತಾನಂದ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಖಾಜಿ ಅಬ್ದುಲ್ ರೆಹಮಾನ್, ರತ್ನಾಕರ ಮೇಸ್ತ, ಖಜಾಂಚಿಯಾಗಿ ದಾಮೋದರ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ವಿಶ್ವನಾಥ್ ಹೆಗ್ಡೆ, ಕರಾಣೆ ಮೊಹಿದ್ದಿನ ಸಾಹೇಬ್, ಚಂದ್ರ ಮೊಗವೀರ, ರಾಮದಾಸ ಮೇಸ್ತ ಇವರನ್ನು ಸರ್ವಾನುಮತದದಿಂದ ಆಯ್ಕೆಮಾಡಲಾತು.