ಶಿರೂರು; ಜೆಸಿಐ ಶಿರೂರು ಇದರ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ಬೆಸುಗೆ -2024 ಕಾರ್ಯಕ್ರಮ ಆಲಂದೂರು ಗೌರಿ ರಂಗ ಮಂಟಪದಲ್ಲಿ ನಡೆಯಿತು.ಆಲಂದೂರು ಶ್ರೀ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ನಾಗರಾಜ ಭಟ್ ಜೇಸಿ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜೀವನದಲ್ಲಿ ಯಶಸ್ಸು ಸುಲಭವಾಗಿ ದೊರೆಯುವುದಿಲ್ಲ.ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆ ಇದ್ದಾಗ ವ್ಯಕ್ತಿತ್ವ ಬೆಳೆಯುತ್ತದೆ.ಸಾಮಾಜಿಕ ಕಾಳಜಿ ಇದ್ದಾಗ ಬದುಕು ಸಾರ್ಥಕತೆ ಈ ನಿಟ್ಟಿನಲ್ಲಿ ಶಿರೂರು ಜೆಸಿಐ ಸಂಸ್ಥೆ ಸಾಮಾಜಿಕ ಚಟುವಟಿಕೆ ಶ್ಲಾಘನೀಯವಾಗಿದೆ ಎಂದರು.
ಜೇಸಿ ವಲಯ 15ರ ವಲಯಾಧ್ಯಕ್ಷ ದೀಪಕ್ ರಾಜ್ ಮಾತನಾಡಿ ಜೆಸಿಐ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಸಮಾಜಮುಖಿ ಕಾರ್ಯಕ್ರಮಗಳಿಂದ ಮನ್ನಣೆ ಪಡೆದುಕೊಂಡಿದೆ.ವ್ಯಕ್ತಿತ್ವ ವಿಕಸನದ ಜೊತೆಗೆ ಸಮಾಜದ ಬೆಳವಣಿಗೆಯಲ್ಲಿ ತೊಡಗಿಸಿಕೊಂಡಿದೆ ಎಂದರು.
ಶಿರೂರು ಜೆಸಿಐ ಅಧ್ಯಕ್ಷ ಸತೀಶ ಕೊಠಾರಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾನಸ ಮಿತ್ರ ಮಂಡಳಿ ಅಧ್ಯಕ್ಷ ಉದಯ ಮಾಕೋಡಿ,ಧ.ಗ್ರಾ.ಯೋಜನೆ ಭಜನಾ ಪರಿಷತ್ ಗೌರವಾಧ್ಯಕ್ಷ ರಘುರಾಮ ಕೆ.ಪೂಜಾರಿ,ಸುರಭಿ ಅಧ್ಯಕ್ಷ ಆನಂದ ಮದ್ದೋಡಿ,ಪೂರ್ವಾಧ್ಯಕ್ಷ ಪ್ರಸಾದ ಪ್ರಭು,ನಾಗೇಂದ್ರ ಪ್ರಭು,ಜೇಸಿರೇಟ್ ಅಧ್ಯಕ್ಷೆ ಲತಾ ಪೂಜಾರಿ,ಜೆಜೆಸಿ ಅಧ್ಯಕ್ಷೆ ಮೇಘನಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಭಾರತೀಯ ಗಡಿ ಭದ್ರತಾ ಪಡೆಯ ದೀಕ್ಷಾ ಭಂಡಾರಿ ಯವರನ್ನು ಸಮ್ಮಾನಿಸಲಾಯಿತು.ನಿಕಟಪೂರ್ವಾಧ್ಯಕ್ಷ ಸುರೇಶ್ ಮಾಕೋಡಿ ಸ್ವಾಗತಿಸಿದರು ಕಾರ್ಯದರ್ಶಿ ಜಯಂತ ಪೂಜಾರಿ ವಂದಿಸಿದರು.
ವರದಿ/ಗಿರಿ ಶಿರೂರು
ಚಿತ್ರ; ಸುರೇಶ್ ಮಾಕೋಡಿ