ಬೈಂದೂರು: ಹಳ್ಳಿಮಾರ್ಟ್ ಹವಾನಿಯಂತ್ರಣ ಮಹಾಗಣಪತಿ ಸೂಪರ್ ಮಾರ್ಕೇಟ್ ಅರೆಹೊಳೆಯಲ್ಲಿ ಶುಕ್ರವಾರ ಉದ್ಘಾಟನೆಗೊಂಡಿತು.ಬಂದರು,ಮೀನುಗಾರಿಕೆ ಮತ್ತು ಜಲಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ ಹಳ್ಳಿಮಾರ್ಟ್ ಶ್ರೀ ಮಹಾಗಣಪತಿ ಸೂಪರ್ ಮಾರ್ಕೇಟ್ ಉದ್ಘಾಟಿಸಿ ಮಾತನಾಡಿ ಅರೆಹೊಳೆ ಗ್ರಾಮೀಣ ಪ್ರದೇಶ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದು ಬಹಳ ಶ್ಲಾಘನೀಯವಾಗಿದೆ. ಗ್ರಾಮೀಣ ಭಾಗದಲ್ಲಿ ಸೂಪರ್ ಮಾರುಕಟ್ಟೆಯ ಅಗತ್ಯವಿದೆ. ಒಂದೇ ಸೂರಿನಲ್ಲಿ ಎಲ್ಲವೂ ಲಭ್ಯವಿದ್ದು, ಜನರಿಗೆ ಹೆಚ್ಚಿನ ಅನುಕೂಲವಾಗಿಲಿದೆ. ಮನೆ ಬಾಗಿಲಿಗೆ ತಲುಪಿಸುವ ಸೌಲಭ್ಯವು ಗ್ರಾಹಕರ ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ. ಗ್ರಾಹಕರಿಗೆ ಇಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳು ಸಿಗಲಿವೆ. ಈ ಸೂಪರ್ ಮಾಕೇಟ್ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಶುಭಾಹಾರೈಸಿದರು.
ಈ ಸಂದರ್ಭದಲ್ಲಿ ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ, ಮರವಂತೆ – ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಅಧ್ಯಕ್ಷ ಎಸ್. ರಾಜು ಪೂಜಾರಿ, ಬೈಂದೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಉಪ್ಪುಂದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ,ರವಿ ಶೆಟ್ಟಿ ಕುದ್ರುಕೋಡು ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಗಣ್ಯರಿಗೆ ಹಳ್ಳಿಮನೆ ಮಹಾಗಣಪತಿ ಸೂಪರ್ ಮಾರ್ಕೇಟ್ ವತಿಯಿಂದ ಗೌರವಿಸಿ ಸನ್ಮಾನಿಸಿಲಾಯಿತು.
ಹಳ್ಳಿಮನೆ ಹವಾನಿಯಂತ್ರಣ ಮಹಾಗಣಪತಿ ಸೂಪರ್ ಮಾರ್ಕೇಟ್ ಮುಖ್ಯಸ್ಥ ಹಕ್ಕಾಡಿ ಜಗದೀಶ್ ಪೂಜಾರಿ, ಹಾಗೂ ಕುಟುಂಬದವರು ಇದ್ದರು.
News/pic: Giri Shiruru