ಬೈಂದೂರು: ಬೈಂದೂರಿನ ಇತಿಹಾಸ ಪ್ರಸಿದ್ದ ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 03 ರಿಂದ 12ರ ವರೆಗೆ ಅದ್ದೂರಿಯ ಬೈಂದೂರು ದಸರಾ ನಡೆಯಲಿದೆ ಎಂದು ಬೈಂದೂರು ದಸರಾ ಉತ್ಸವ ಸಮಿತಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದರು ಅವರು ಮಂಗಳವಾರ ಬೈಂದೂರು ಶಾರದಾ ವೇದಿಕೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಕಳೆದ ವರ್ಷ ಬೈಂದೂರು ದಸರಾ ಅತ್ಯಂತ ಯಶಸ್ವಿಯಾಗಿ ನಡೆದಿದೆ.ಈ ವರ್ಷವೂ ಕೂಡ ಸಾರ್ವಜನಿಕರ ಸಹಕಾರದೊಂದಿಗೆ ವಿಭಿನ್ನ ಮತ್ತು ವಿಶಿಷ್ಟವಾಗಿ ಬೈಂದೂರು ದಸರಾ ನಡೆಯಲಿದೆ ಎಂದರು.ಮಾತ್ರವಲ್ಲದೆ ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ದಸರಾ ಸಂಭ್ರಮ ಆಚರಿಸುವ ಮೂಲಕ ವಿಶಿಷ್ಟವಾಗಿ ಈ ಬಾರಿ ದಸರಾ ಉತ್ಸವ ನಡೆಯಲಿದೆ.ಅಕ್ಟೋಬರ್ 03 ರಿಂದ 09 ರವರೆಗೆ ಬೈಂದೂರು ತಾಲೂಕಿನ ವಿವಿಧ ಕಡೆಗಳಲ್ಲಿ ಸಾಂಸ್ಕ್ರತಿಕ ಸಂಭ್ರಮ,ಬೈಂದೂರಿನಲ್ಲಿ ದಸರಾ ಕ್ರೀಡಾಕೂಟ ಮತ್ತು ಅ.09 ರಿಂದ 12 ರವರೆಗೆ ಬೈಂದೂರು ಮಹತೋಭಾರ ಸೇನೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಶಾರದೋತ್ಸವ ಸೇರಿದಂತೆ ಅದ್ದೂರಿಯ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.ರಾಜ್ಯದ ವಿವಿಧ ಜಿಲ್ಲೆಗಳಿಂದ ವಿವಿಧ ಕಲಾ ತಂಡ ಹಾಗೂ ಸಾಂಸ್ಕ್ರತಿಕ ತಂಡಗಳು ಕೂಡ ಆಗಮಿಸಲಿದೆ ಮತ್ತು ಬೈಂದೂರು ತಾಲೂಕಿನಲ್ಲಿ ಅದ್ದೂರಿಯ ಬೈಂದೂರು ದಸರಾ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಎಸ್.ರಾಜು ಪೂಜಾರಿ,ಉಪಾಧ್ಯಕ್ಷ ಅಣ್ಣಪ್ಪ ಪೂಜಾರಿ,ಕಾರ್ಯದರ್ಶಿ ರಾಜೇಶ್ ಬೈಂದೂರು,ಖಜಾಂಚಿ ಉಮೇಶ ದೇವಾಡಿಗ ಬಂಕೇಶ್ವರ,ನಿತಿನ್ ಬೈಂದೂರು,ದಯಾನಂದ ಬೈಂದೂರು,ರಾಘವೇಂದ್ರ ಮೊಗವೀರ,ಸೀತಾರಾಮ ಮೊಗವೀರ,ಗುರುಪ್ರಸಾದ ಎಚ್.ಬೈಂದೂರು ಹಾಜರಿದ್ದರು.

ವರದಿ/ಗಿರಿ ಶಿರೂರು

 

Leave a Reply

Your email address will not be published.

twelve − 2 =