ಬೈಂದೂರು: ನ್ಯಾಯಾಲಯ ಕಕ್ಷಿದಾರರಿಗೆ ಅನುಕೂಲವಾಗಿರಬೇಕೆ ಹೊರತು ವಕೀಲರ ವಯಕ್ತಿಕ ಹಿತಾಸಕ್ತಿಗಲ್ಲ.ಬೈಂದೂರು ನ್ಯಾಯಾಲಯವನ್ನು ಕುಂದಾಪುರಕ್ಕೆ ವರ್ಗಾಯಿಸುವಂತೆ ಉಚ್ಚ ನ್ಯಾಯಾಲಯಕ್ಕೆ ಕೇಳಿಕೊಂಡಿರುವುದು ಬೈಂದೂರು ಜನತೆಗೆ ಮಾಡುವ ಅನ್ಯಾಯವಾಗಿದೆ.ನ್ಯಾಯಾಲಯದಲ್ಲಿ ಕೊರತೆಗಳಿದ್ದಲ್ಲಿ ಸರಕಾರ ಮತ್ತು ಜಿಲ್ಲಾ ಉಚ್ಚ ನ್ಯಾಯಾಲಯ ಪರಿಹರಿಸಬೇಕೆ ವಿನಹ ನ್ಯಾಯಾಲಯವನ್ನು ದೂರದ ಕುಂದಾಪುರಕ್ಕೆ ವರ್ಗಾಯಿಸುವುದು ಪರಿಹಾರವಲ್ಲ ಎಂದು ಬೈಂದೂರು ತಾಲೂಕು ವಕೀಲರ ಸಂಘ ಆಗ್ರಹಿಸಿದೆ.ಅವರು ಬೈಂದೂರು ತಹಶೀಲ್ದಾರರಿಗೆ ಮನವಿ ನೀಡಿ ಕುಂದಾಪುರ ವಕೀಲ ಕೆ.ಸಿ ಶೆಟ್ಟಿ ಜನವಿರೋಧಿ ನೀತಿ ಖಂಡಿಸಿ ಬೈಂದೂರು ಸಿವಿಲ್ ಮತ್ತು ಜೆ.ಎಫ್.ಎಂ ನ ನ್ಯಾಯಾಲಯವು ಬೈಂದೂರು ಜನತೆಯ ದಶಕದ ಹೋರಾಟದ ಫಲವಾಗಿದೆ.ಇದರ ಹಿಂದೆ ಹಲವು ಹೋರಾಟಗಾರರ ಪರಿಶ್ರಮವಿದೆ.ಬೈಂದೂರು ತಾಲೂಕು ಘೋಷಣೆಯಾದಾಗ ತಾಲೂಕಿನಲ್ಲಿ ಅತೀ ಹೆಚ್ಚಿನ ಪ್ರಕರಣಗಳಿರುವುದನ್ನು ಗಮನಿಸಿ ಬೈಂದೂರಿನಲ್ಲಿ ನ್ಯಾಯಾಲಯದ ಅವಶ್ಯಕತೆಯನ್ನು ಗಮನಿಸಿ ಮಂಜೂರು ಮಾಡಲಾಗಿದೆ.ನ್ಯಾಯಾಲಯಕ್ಕಾಗಿ ಜಾಗ ಕಾಯ್ದಿರಿಸಿದ್ದು ಶೀಘ್ರ ಕಟ್ಟಡ ನಿರ್ಮಾಣ ಮಾಡಬೇಕು.ಜಿಲ್ಲಾ ಮತ್ತು ಉಚ್ಚ ನ್ಯಾಯಾಲಯವು ಕುಂದಾಪುರದ ಕೆಲವು ವ್ಯಕ್ತಿಗಳ ವಯಕ್ತಿಕ ಹಿತಾಶಕ್ತಿಯನ್ನು ಪ್ರೋತ್ಸಾಹಿಸದೆ.ಬೈಂದೂರಿನಲ್ಲಿ ನ್ಯಾಯಾಲಯ ಉಳಿಸಲು ಕ್ರಮಕೈಗೊಳ್ಳಬೇಕು  ಎಂದು ಬೈಂದೂರು ವಕೀಲರ ಸಂಘದ ಅಧ್ಯಕ್ಷ ಮೋಬಿ ಪಿ.ಸಿ ಹೇಳಿದರು.ಬೈಂದೂರು ತಾಲೂಕು ವಕೀಲರ ಸಂಘದ ಸದಸ್ಯರು ಜಾಥಾ ಮೂಲಕ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

 

News;Giri shiruru

Leave a Reply

Your email address will not be published.

5 × one =