ಬೈಂದೂರು: ಬಿಜೆಪಿ ಪಕ್ಷ ಕೇವಲ ಜನರನ್ನು ಮರುಳು ಮಾಡಿ ನಾಟಕವಾಡುವ ಪಕ್ಷ.ಧರ್ಮ ಜಾತಿಗಳ ನಡುವೆ ಎತ್ತಿಕಟ್ಟಿ ದಲಿತರು ಜನಸಾಮಾನ್ಯರನ್ನು ದಾರಿ ತಪ್ಪಿಸಿ ಬಡ ಕುಟುಂಬದ ಯುವಕರನ್ನು ಲಾಭಕ್ಕೆ ಬಳಸಿಕೊಳ್ಳುವ ಮೂಲಕ ಅಧಿಕಾರ ಪಡೆಯುವ ಹುನ್ನಾರ ಕರಗತಮಾಡಿಕೊಂಡಿದ್ದಾರೆ.ಸುಳ್ಳು ಭರವಸೆ ನೀಡಿದ ಬಿಜೆಪಿ ಜನರಿಗೆ ಕೊಟ್ಟಿದ್ದು ಕೇವಲ ಚೊಂಬು ಮಾತ್ರ ಎಂದು ಬೈಂದೂರು ಕ್ಷೇತಗರದ ಮಾಜಿ ಶಾಸಕ ಬಿ.ಎಮ್ ಸುಕುಮಾರ ಶೆಟ್ಟಿ ಹೇಳಿದರು.ಅವರು ಶನಿವಾರ ಬೈಂದೂರು ಜೆ.ಎನ್.ಆರ್ ಕಲಾ ಮಂದಿರ ಯಡ್ತರೆಯಲ್ಲಿ ನಡೆದ ಬೈಂದೂರು ನಗರ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಕಾರ್ಯಕ್ರಮವನ್ನುದ್ದೇಶಿಸಿ ಈ ಮಾತುಗಳನ್ನಾಡಿದರು
ಬಿ.ವೈ.ರಾಘವೇಂದ್ರ ಬೈಂದೂರು ಕ್ಷೇತ್ರದ ಅಭಿವ್ರದ್ದಿ ಮಾಡಿಲ್ಲ, ಬೇನಾಮಿ ಆಸ್ತಿ ಮಾಡಿದ್ದಾರೆ:ಕೆ.ಗೋಪಾಲ ಪೂಜಾರಿ; ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ ಬೈಂದೂರು ಕ್ಷೇತ್ರದಲ್ಲಿ ಗುರುತಿಸುವಂತ ಯಾವ ಅಭಿವ್ರದ್ದಿ ಕೆಲಸ ಕೂಡ ಮಾಡಿಲ್ಲ.ಮರೀನಾ ಬೀಚ್ ಯೋಜನೆ ತರುವ ಹುನ್ನಾರದ ಮೂಲಕ ಮೀನುಗಾರರ ಬದುಕು ಬರಡಾಗಿಸಿದ್ದಾರೆ.ಕ್ಷೇತ್ರದಲ್ಲಿ ಯಾವ ಅಭಿವ್ರದ್ದಿ ಕಾರ್ಯಮಾಡಿಲ್ಲ ಆಪ್ತರ ಹೆಸರಲ್ಲಿ ಬೇನಾಮಿ ಆಸ್ತಿ ಮಾಡಿಸಿದ್ದಾರೆ.ಈ ಬಾರಿ ಕಾಂಗ್ರೇಸ್ ಬೆಂಬಲಿಸಿದರೆ ಬೈಂದೂರು ಪಟ್ಟಣ ಪಂಚಾಯತ್‌ನಿಂದ ಗ್ರಾಮೀಣ ಭಾಗಗಳನ್ನು ಬೇರ್ಪಡಿಸಿ ಹಳ್ಳಿಗಳನ್ನು ಗ್ರಾಮ ಪಂಚಾಯತ್ ಮಾಡಲಾಗುವುದು ಎಂದರು
ಈ ಸಂದರ್ಭದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್,ಚಿತ್ರನಟ ಶಿವರಾಜ್ ಕುಮಾರ್, ಕೆಪಿಸಿಸಿ ಮಾಧ್ಯಮ ವಕ್ತಾರರು ಹಾಗೂ ಬೈಂದೂರು ಉಸ್ತುವಾರಿ ಅನಿಲ್, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಎಸ್ ರಾಜು ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ ಪಡುಕೋಣೆ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಜಿ ಅಧ್ಯಕ್ಷ ಮದನ್ ಕುಮಾರ್ ಉಪ್ಪುಂದ,ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೌರಿ ದೇವಾಡಿಗ,ಕಾಂಗ್ರೆಸ್ ಮುಖಂಡರಾದ ಕೆ.ಬಾಬು ಹೆಗ್ಡೆ, ಪ್ರಕಾಶ್ಚಂದ್ರ ಶೆಟ್ಟಿ, ನಾರಾಯಣ ಅಳ್ವೆಗದ್ದೆ, ರಿಯಾಜ್ ಅಹಮದ್, ಟಿ ಶಂಕರ ಪೂಜಾರಿ, ರಘುರಾಮ್ ಶೆಟ್ಟಿ ಉಪ್ಪುಂದ, ನಗರ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಹೋಬಳಿದಾರ್, ಕೆ.ವಿ ಸತೀಶ್, ರಾಮ ಸೋಡಿತಾರ್, ಸುಬ್ರಹ್ಮಣ್ಯ ಪೂಜಾರಿ,ಬೈಂದೂರು ಕಾಂಗ್ರೆಸ್ ಯುವ ಮೋರ್ಚಾ ಅಧ್ಯಕ್ಷ ಶೇಖರ್ ಪೂಜಾರಿ ಉಪ್ಪುಂದ,ಮಣಿಕಂಠ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಬೈಂದೂರು ನಗರ ಕಾಂಗ್ರೆಸ್ ಅಧ್ಯಕ್ಷ ನಾಗರಾಜ ಗಾಣಿಗ ಸ್ವಾಗತಿಸಿದರು.ಬ್ಲಾಕ್ ಕಾಂಗ್ರೆಸ್ ಬೈಂದೂರು ಪ್ರಚಾರ ಸಮಿತಿ ಅಧ್ಯಕ್ಷ ಡಾ ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು.
News/pic: Giri shiruru