ಬೈಂದೂರು: ಖಾಸಗಿ ಜಾಗಕ್ಕೆ ನುಗ್ಗಿ ಗೂಂಡಾಗಿರಿ ಮಾಡಿ ಜಾಗದ ಮಾಲಕನಿಗೆ ಬೆದರಿಕೆ ಹಾಕಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತುಗಳನ್ನು ನಾಶ ಮಾಡಿದ ಘಟನೆ ಶಿರೂರಿನಲ್ಲಿ ನಡೆದಿದೆ. ಇಲ್ಲಿನ ಝಹೀರ (37), ಬೆಂಗಳೂರಿನ ಕೋರಮಂಗಲದಲ್ಲಿ ಕ್ಯಾಂಟೀನ್ ವ್ಯವಹಾರ ನಡೆಸುತಿದ್ದಾರೆ. ಬೈಂದೂರು ತಾಲೂಕು ಶಿರೂರು ಗ್ರಾಮದಲ್ಲಿ 0.31 ಎಕ್ರೆ ಜಾಗವನ್ನು ಶಮಿಮಾ ಬಾನು ಎಂಬುವವರಿಂದ ಕ್ರಯಕ್ಕೆ ಪಡೆದು ಅದರಲ್ಲಿ ನೂರಕ್ಕಿಂತ ಹೆಚ್ಚು ಕಂಬೊಟಾ ಹಣ್ಣಿನ ಗಿಡಗಳನ್ನು ನೆಟ್ಟು ಅದಕ್ಕೆ ನೀರಾವರಿಗಾಗಿ ಪೈಪ್ ಲೈನ್ ಹಾಗೂ ಸ್ಪಿಂಕ್ಲರ್ ಗಳನ್ನು ಹಾಗೂ ಕಾವಲಿಗಾಗಿ ಯುಪಿಎಸ್ ಬ್ಯಾಟರಿ ಹಾಗೂ 4 ಸಿಸಿ ಟಿವಿ ಕ್ಯಾಮರಾಗಳು ಹಾಗೂ ಡಿವಿ ಆರ್ ನ್ನು ಅಳವಡಿಸಲಾಗಿದೆ.ಈ ಜಾಗವನ್ನು ಸಹೋದರ ಇರ್ಷಾದ್ ನೋಡಿಕೊಳ್ಳುತ್ತಿದ್ದು ಏ.17 ರಂದು ರಾತ್ರಿ 10:00 ಗಂಟೆ ಹೊತ್ತಿಗೆ ಅಬ್ದುಲ್ ಸಮದ್ ಎಂಬಾತನು ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಮಾರನೆಯ ದಿನ ಅವರು ಹಾಗೂ ಅವರ ಸಹೋದರ ಇರ್ಷಾದ್ ಎಂದಿನಂತೆ ತೋಟಕ್ಕೆ ನೀರು ಬಿಡಲು ಹೋದಾಗ ತೋಟದಲ್ಲಿದ್ದ ಪೈಪ್ ,ಸಿಸಿಟಿವಿ ಹಾಗೂ ಇತರೇ ವಸ್ತುಗಳನ್ನು ದ್ವಂಸ ಮಾಡಿದ್ದಲ್ಲದೇ ಯುಪಿಎಸ್ ಬ್ಯಾಟರಿ ,ಡಿವಿ.ಆರ್ ಪ್ಲೇಯರ್ ಹಾಗೂ ನೀರಿನ ಪಂಪ್ ಸೆಟ್ ನ್ನು ಕದ್ದುಕೊಂಡು ಹೋಗಿರುವುದು ಕಂಡು ಬಂದಿದೆ. ಅಬ್ದುಲ್ ಸಮದ್ ಮತ್ತು ಆತನ ಸಹಚರರು ಈ ಕೃತ್ಯ ಎಸಗಿರುತ್ತಾರೆ ಎಂದು ಹೇಳಲಾಗಿದ್ದು ಆರೋಪಿಗಳ ಕೃತ್ಯದಿಂದ ರೂಪಾಯಿ 3 ಲಕ್ಷ ನಷ್ಟ ಉಂಟಾಗಿರುತ್ತದೆ. ಆರೋಪಿ ಅಬ್ದುಲ್ ಸಮದ್ ನನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.

ಬೈಂದೂರು ಆರಕ್ಷಕ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

13 + eight =