ಬೈಂದೂರು: ನೈಜ ಹಿಂದುತ್ವ ಮತ್ತು ಮೂಲ ಬಿಜೆಪಿಯವರಾಗಿ ದುಡಿದವರು ನಾವು.ಬಿ.ಎಸ್.ಯಡ್ಯೂರಪ್ಪ ಕುಟುಂಬದವರಿಗೆ ನೈಜ ಹಿಂದುತ್ವದ ಬಗ್ಗೆ ಮಾತನಾಡುವ ಸಾಮರ್ಥ್ಯವಿಲ್ಲ.ಕಾರಣವೆಂದರೆ ಕೆ.ಜೆ.ಪಿ ಯಲ್ಲಿರುವಾಗ ಟಿಪ್ಪು ಸುಲ್ತಾನರ ಕಡ್ಗ ಹಿಡಿದಿದ್ದಾರೆ.ಬೈಂದೂರು ಬಿಜೆಪಿಯವರು ಶ್ರೀಧರ ಬಿಜೂರು ನಾಯಕರಲ್ಲ ಎನ್ನುವುದಕ್ಕೆ ಪ್ರತಿಕ್ರಯಿಸಿ 2014ರ ನಂತರ ಬಂದ ದೀಪಕ್ ಶೆಟ್ಟಿ ಯವರಿಗೆ ನಾವು ಹಿಂದುತ್ವದ ಹಾಗೂ ಬಿಜೆಪಿಯ ನೈತಿಕತೆಯ ಪಾಠ ಕಲಿಯವಬೇಕಿಲ್ಲ.1992 ರಲ್ಲಿ ಈಶ್ವರಪ್ಪನವರ ನೇತ್ರತ್ವದಲ್ಲಿ 12 ಜನ ಪುರಸಭೆ ಸದಸ್ಯರನ್ನು ಬಿಜೆಪಿ ಕರೆತಂದು ಬಳಿಕ ಬಿಜೆಪಿ ಶಾಸಕರು ಆಯ್ಕೆಯಾಗುವ ಜೊತೆಗೆ ಜಿ.ಪಂ ವಿಧಾನಸಭೆ ಹಾಗೂ ಲೋಕಸಭೆಯಲ್ಲೂ ಕೂಡ ಬಿಜೆಪಿಯನ್ನು ಗೆಲ್ಲಿಸಿದ್ರಿ ಈಗ ಬೈಂದೂರು ಬಿಜೆಪಿಯಲ್ಲಿ ಮೂಲ ಕಾರ್ಯಕರ್ತರು ಬೇಕಿಲ್ಲ.ಕಾಂಗ್ರೆಸ್‌ನಿಂದ ಬಂದವರದ್ದೆ ಸೌಂಡ್ ಇದೆ.ಸದ್ಯದ ಮಟ್ಟಿಗೆ ರಾಘಣ್ಣನ ಪ್ಯಾಕೇಜ್‌ಗಾಗಿ ಮಾತ್ರ ಕೆಲಸ ನಡೆಯುತ್ತಿದೆ ಎಂದು ಹಿಂದೂ ಮುಖಂಡರಾದ ಶ್ರೀಧರ ಬಿಜೂರು ಹೇಳಿದರು ಅವರು ಬುಧವಾರ ಬೈಂದೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಬೈಂದೂರು ಕ್ಷೇತ್ರದ ಪ್ರತಿ ಬೂತ್ ಮಟ್ಟದಲ್ಲಿ ಸಮಿತಿ ಮಾಡಲಾಗಿದೆ.ಉತ್ತಮ ಸಂಘಟನೆಯಾಗಿದೆ.ಈಶ್ವರಪ್ಪನವರು ಈ ಬಾರಿ ಅತ್ಯಧಿಕ ಮತಗಳ ಅಂತರದಿಂದ ಮುನ್ನೆಡೆ ಕೊಡಲಿದ್ದೇವೆ.ಗುರುವಾರ ಈಶ್ವರಪ್ಪ ಉಪ್ಪುಂದದಲ್ಲಿ ಬ್ರಹತ್ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗೋಪಾಲಕೃಷ್ಣ ನಾಡ,ಗಣೇಶ ರಾವ್ ಬೈಂದೂರು,ಶ್ರೀಧರ ಬಡಾಕೆರೆ ಹಾಜರಿದ್ದರು.

News/Giri shiruru

 

 

Leave a Reply

Your email address will not be published.

twelve − four =