ಬೈಂದೂರು: ತಾ.ಪಂ ಸದಸ್ಯೆಯಾಗಿರುವ ಮೊದಲು ನಾನು ಕೂಲಿ ಕೆಲಸ ಮಾಡಿಕೊಂಡಿದ್ದೆ. ಜನರ ಮನೆ ಮನೆಗೆ ನಡೆದುಕೊಂಡು ಹೋಗಿ ಜನರ ಸಮಸ್ಯೆಗಳಿಗೆ ಸ್ಪಂಧಿಧಿಸಿದ್ದೆ.ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಬಹಳ ಬೇಗ ನಾಯಕರ ಪ್ರಭಾವದಿಂದ ಹಸಿ ಹಸಿ ಸುಳ್ಳುಗಳನ್ನು ಹೇಳಲು ಕಲಿತಿದ್ದಾರೆ.ನನಗೆ ಕರೆ ಮಾಡಿ ಬಿಜೆಪಿಗೆ ಆಹ್ವಾನ ನೀಡಿದ್ದರು.ನಾನು ಕಾಂಗ್ರೆಸ್ ಪಕ್ಷ ಬಿಟ್ಟು ಎಲ್ಲೂ ಹೋಗಲ್ಲ.ಆದರೆ ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾನು ಅವರಿಗೆ ಕರೆ ಮಾಡಿರುವುದಾಗಿ ಹೇಳಿದ್ದಾರೆ.ಪಕ್ಷ ನಿಷ್ಠೆಯ ಪಾಠ ಅವರಿಂದ ಕಲಿಯಬೇಕಾಗಿಲ್ಲ ಎಂದು ಬೈಂದೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೌರಿ ದೇವಾಡಿಗ ಹೇಳಿದರು ಅವರು ಶುಕ್ರವಾರ ಬೈಂದೂರು ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಈ ಮಾತುಗಳನ್ನಾಡಿದರು.

ಹಿಂದುಳಿದ ವರ್ಗದ ಅಧ್ಯಕ್ಷ ಮಣಿಕಂಠ ದೇವಾಡಿಗ ಮಾತನಾಡಿ ನಾನು ಅತಿಥಿ ಉಪನ್ಯಾಸಕ.ನನಗೆ ರಾಜಕೀಯ ವೃತ್ತಿಯಲ್ಲ ಅದು ಪ್ರವೃತ್ತಿ.ಅನುದಾನ ವಿಚಾರ ಸೇರಿದಂತೆ ಸಾಮಾಜಿಕ ವಿಚಾರಗಳ ಬಗ್ಗೆ ಪ್ರಿಯದರ್ಶಿನಿ ದೇವಾಡಿಗ ರವರಿಗೆ ತಿಳುವಳಿಕೆ ಇಲ್ಲಾ.ಮೊದಲು ತಿಳಿದುಕೊಂಡು ಮಾತನಾಡಲಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ ನಾಡ,ಕಾಂಗ್ರೆಸ್ ಮುಖಂಡರಾದ ಜಗದೀಶ ದೇವಾಡಿಗ ,ಬಾಬು ದೇವಾಡಿಗ ಉಪ್ಪುಂದ,ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭರತ್ ದೇವಾಡಿಗ,ಮಂಜು ಉಪ್ಪುಂದ,ಪ್ರಕಾಶ ದೇವಾಡಿಗ ಹೇನ್‌ಬೇರು ಹಾಜರಿದ್ದರು.

ವರದಿ/ಗಿರಿ ಶಿರೂರು

 

Leave a Reply

Your email address will not be published.

five × 1 =