ಬೈಂದೂರು: ಸದ್ಯದ ಮಟ್ಟಿಗೆ ಬೈಂದೂರು ರಾಜಕೀಯದಲ್ಲಿ ಮಹಿಳಾ ನಾಯಕಿಯರ ಮಾತಿನ ಜಟಾಪಟಿ ತಾರಕ್ಕಕ್ಕೇರಿದೆ.ದೇವಾಡಿಗ ಸಮುದಾಯದ ಅನುದಾನ ವಿಚಾರದಲ್ಲಿ ಬಂದಿರುವ ಹೇಳಿಕೆ ವಿವಿಧ ಮಜಲುಗಳನ್ನು ಪಡೆದು ಕಾಂಗ್ರೆಸ್ ನಾಯಕಿ ಗೌರಿ ದೇವಾಡಿಗ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗರ ನಡುವೆ ವಾಕ್‌ಸಮರ ಏರ್ಪಟ್ಟಿದೆ.ಇತ್ತೀಚೆಗೆ ಗೌರಿ ದೇವಾಡಿಗರವರು ಪ್ರಿಯದರ್ಶಿನಿಯವರು ಕುಟುಂಬ ಕಾಂಗ್ರೆಸ್ ಋಣದಲ್ಲಿದೆ ಎನ್ನುವ ಹೇಳಿಕೆಗೆ ಮಾಧ್ಯಮದ ಮುಂದೆ ಪ್ರತಿಕ್ರಯಿಸಿ ಗೌರಿ ದೇವಾಡಿಗರನ್ನು ರಾಜಕೀಯವಾಗಿ ಬೆಳೆಸಿರುವುದು ಬಿಜೆಪಿ ಪಕ್ಷ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕಾಗಿದೆ.ಪಕ್ಷದಲ್ಲಿ ಬೆಳೆದ ಬಳಿಕ ಎಲ್ಲಾ ಕಾರ್ಯಕರ್ತರನ್ನು ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದಾರೆ.ನಿನ್ನೆ ನಾನು ನೀಡಿದ ಹೇಳಿಕೆಗೆ ಬೆಳಿಗ್ಗೆ ಕರೆ ಮಾಡಿ ಗೋಪಾಲ ಪೂಜಾರಿ ಯವರ ಬಗ್ಗೆ ಹೇಳಿರುವುದು ಸರಿಯಾಗಿದೆ ಎಂದಿರುವ ಇವರು ಸಂಜೆ ಕಾಂಗ್ರೆಸ್ ನಾಯಕರ ಒತ್ತಡಕ್ಕೆ ಪತ್ರಿಕಾಗೋಷ್ಠಿ ನಡೆಸಿದ್ದಾರೆ.ಹಾಗಿದ್ದರೆ ಕಾಂಗ್ರೆಸ್ ಪಕ್ಷ ಮತ್ತು ಗೋಪಾಲ ಪೂಜಾರಿಯವರ ಬಗ್ಗೆ ಗೌರಿ ದೇವಾಡಿಗರ ಸ್ಪಷ್ಟ ನಿಲುವು ಎನು? ಎನ್ನುವುದು ನೀವು ತಿಳಿಸಬೇಕಾಗಿದೆ.ನನ್ನ ತಾಯಿ ಗೋಪಾಲ ಪೂಜಾರಿಯವರು ಬರುವ ಮುನ್ನ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ.ಹೀಗಾಗಿ ಪಕ್ಷಕ್ಕೆ ಕೆಲಸ ಮಾಡಿದ ಋಣ ಇದೆ.ಸಹಜವಾಗಿ ಗೋಪಾಲ ಪೂಜಾರಿಯವರು ಪಕ್ಷದ ನೆಲೆಯಲ್ಲಿ ಗೌರವ ನೀಡಿದ್ದಾರೆ ಎಂದಿದ್ದಾರೆ.
ಒಟ್ಟಾರೆಯಾಗಿ ಕಾಂಗ್ರೆಸ್ ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿಯವರು ಬಿಜೆಪಿ ಸರಕಾರ ದೇವಾಡಿಗ ಸಮುದಾಯ ಭವನಕ್ಕೆ ಅನುದಾನ ಬಿಡುಗಡೆ ಮಾಡದೆ ಕೇವಲ ಆದೇಶ ಪತ್ರ ತೋರಿಸಿ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಹೇಳಿಕೆ ದೇವಾಡಿಗ ಸಮುದಾಯದ ಇಬ್ಬರ ನಾಯಕಿಯರ ನಡುವೆ ಮಾತಿನ ಕಿಚ್ಚು ಹೆಚ್ಚಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ,ಬೈಂದೂರು ಬಿಜೆಪಿ ಮಂಡಲದ ಕೋಶಾಧಿಕಾರಿ ಗಣೇಶ ಗಾಣಿಗ,ಬಿಜೆಪಿ ಹಿಂದುಳಿದ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಂಜುನಾಥ ದೇವಾಡಿಗ ಉಪಸ್ಥಿತರಿದ್ದರು.
News; Giri shiruru