ಬೈಂದೂರು: ಕಳೆದ 30 ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಉಪತಹಶೀಲ್ದಾರರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಭೀಮಪ್ಪ ಹನುಮಪ್ಪ ಬಿಲ್ಲಾರ್ ಇವರ ಬೀಳ್ಕೋಡುಗೆ ಸಮಾರಂಭ ಬೈಂದೂರು ತಾಲೂಕು ಆಡಳಿತ ಕಛೇರಿಯಲ್ಲಿ ನಡೆಯಿತು.ಬೈಂದೂರು ತಾಲೂಕು ಆಡಳಿತದ ವತಿಯಿಂದ ಅವರನ್ನು ಗೌರವಿಸಲಾಯಿತು ಬಳಿಕ ಮಾತನಾಡಿದ ಅವರು ಕಂದಾಯ ಇಲಾಖೆಯಲ್ಲಿ ಸೇವೆ ನೀಡಿರುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಿದ ಸಂತೃಪ್ತಿಯಿದೆ.ಸರಕಾರದ ನಿಯಮ ಪ್ರಕಾರ ನಿವೃತ್ತಿ ಸಹಜ ಆದರೆ ಕರ್ತವ್ಯದಲ್ಲಿದ್ದಾಗ ಇಲಾಖೆಯಲ್ಲಿನ ಅನುಭವಗಳು ಸದಾ ಹಸಿರಾಗಿರುತ್ತದೆ ಮತ್ತು ಸಂತೃಪ್ತಿ ನೀಡಿದೆ ಎಂದರು.

ಈ ಸಂದರ್ಭದಲ್ಲಿ ಬೈಂದೂರು ತಹಶೀಲ್ದಾರ ಪ್ರದೀಪ್ ಆರ್,ಉಪತಹಶೀಲ್ದಾರ ಲತಾ ಶೆಟ್ಟಿ,ಗಿರಿಜಾ ಮೊಗೇರ್,ಶ್ರೀನಿಧಿ ಶೆಟ್ಟಿ,ಕಂದಾಯ ನಿರೀಕ್ಷಕ ಮಂಜು ಹಾಗೂ ಕಂದಾಯ ಇಲಾಖೆಯ ಸಿಬಂದಿಗಳು ಹಾಜರಿದ್ದರು.

ಸರ್ವೆ ಸೂಪರ್‌ವೈಸರ್ ವಿರೇಶ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

News/Giri shiruru

Leave a Reply

Your email address will not be published.

19 + six =