ಬೈಂದೂರು: ಕಣ್ಣು ಮಾನವನ ದೇಹದ ಅತೀ ಸೂಕ್ಷ್ಮವಾದ ಅಂಗ ಇದನ್ನು ಅತೀ ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕಾದ ಜವಬ್ದಾರಿ ನಮ್ಮೆಲ್ಲರದ್ದಾಗಿದೆ.ಬಡ ಜನರಿಗೆ ಇಂತಹ ಉಚಿತ ಕಣ್ಣಿನ ತಪಾಸಣಾ ಶಿಬಿರಗಳು ನಡೆಸುತ್ತಿರುವ ಸಂಘ ಸಂಸ್ಥೆಗಳ ಪ್ರಯತ್ನ ಶ್ಲಾಘನೀಯವಾಗಿದೆ.ಕಣ್ಣು ಮನುಷ್ಯನ ಅತ್ಯಂತ ಪ್ರಮುಖವಾದ ಇಂದ್ರಿಯ ಎಂದು ಧ.ಗ್ರಾ.ಯೋ ಕೇಂದ್ರ ಸಮಿತಿ ಅಧ್ಯಕ್ಷ ರಘುರಾಮ ಕೆ.ಪೂಜಾರಿ ಹೇಳಿದರು ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.),ಬೈಂದೂರು ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ,ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಡವಿನಕೋಣೆ, ಶಿರೂರು ಶ್ರೀ ಗಣೇಶ ಯುವಕ ಮಿತ್ರ ಮಂಡಳಿ, ಹಡವಿನ ಕೋಣೆ-ಶಿರೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಶಿರೂರು ಇವರ ಸಹಯೋಗದಲ್ಲಿ ಶ್ರೀ ಗಣೇಶ್ ಸೇವಾ ಸಂಘ ಹಡವಿನಕೋಣೆಯಲ್ಲಿ ನಡೆದ ಉಚಿತ ನೇತ್ರ ತಪಾಸಣೆ ಹಾಗೂ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಧ.ಗ್ರಾ.ಯೋಜನೆಯ ಸಿ ಒಕ್ಕೂಟದ ಅಧ್ಯಕ್ಷ ಗಿರೀಶ್ ಮೇಸ್ತ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಸದಸ್ಯ ಶಂಕರ ಮೇಸ್ತ,ಉಡುಪಿ ಪ್ರಸಾದ್ ನೇತ್ರಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮೋಹನದಾಸ್,ಪ್ರಸಾದ ನೇತ್ರಾಲಯದ ಡಾ.ಶ್ರುತಿ,ಗಣೇಶ ಸೇವಾ ಸಂಘದ ಅಧ್ಯಕ್ಷ ಅಣ್ಣಪ್ಪ ವಿ.ಮೇಸ್ತ,ಉಪಾಧ್ಯಕ್ಷ ರಾಮದಾಸ್,ಶೌರ್ಯ ಘಟಕದ ಪ್ರತಿನಿಧಿ ಪ್ರಕಾಶ್ ಮೇಸ್ತ,ಶಿರೂರು ಪ್ರಾ.ಆ,ಕೇಂದ್ರದ ಅಶ್ವಿನಿ ಉಪಸ್ಥಿತರಿದ್ದರು.
ಧ.ಗ್ರಾ.ಯೋಜನೆಯ ವಲಯ ಮೇಲ್ವಿಚಾರಕ ರಾಮ್‌ಗೋಪಾಲ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ಶೌರ್ಯ ಘಟಕದ ಪ್ರತಿನಿಧಿ ಸಂತೋಷ ಕುಮಾರ್ ವಂದಿಸಿದರು.
News/pic: Giri shiruru