ಶಿರೂರು: ಗ್ರಾಮೀಣ ಭಾಗದಲ್ಲಿ ಕಲೆ,ಸಾಹಿತ್ಯ ಮತ್ತು ಸಂಸ್ಕ್ರತಿಯನ್ನು ಉಳಿಸುವ ನಿಟ್ಟಿನಲ್ಲಿ ರಾಗ ತರಂಗ ಸಂಸ್ಥೆಯ ಪ್ರಯತ್ನ ಊರಿನ ಹೆಮ್ಮೆಯಾಗಿದೆ.ಸೀಮಿತ ಸವಲತ್ತುಗಳನ್ನು ಬಳಸಿಕೊಂಡು ಕಲಾಶಕ್ತಿ ಬೆಳೆಸುತ್ತಿರುವ ಸಂಸ್ಥೆಗೆ ಇನ್ನಷ್ಟು ಪ್ರೋತ್ಸಾಹ ಸರಕಾರದಿಂದ ದೊರೆಯಲಿ ಎಂದು ಶಿರೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ ಹೇಳಿದರು ಅವರು ರಾಗತರ೦ಗ ಟ್ರಸ್ಟ್(ರಿ.) ಶಿರೂರು ಸದ್ಗುರು ಧಾಮ ನಿತ್ಯಾನಂದ ನಗರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇದರ ಸಹಯೋಗದಲ್ಲಿ ಪೇಟೆ ಶ್ರೀ ವೆಂಕಟರಮಣ ಸಭಾಭವನದಲ್ಲಿ ನಡೆದ ಸಾಂಸ್ಕೃತಿಕ ಸೌರಭ ಸಭಾ ಕಾರ್ಯಕ್ರಮ ಉದ್ಘಾಟಿಸಿ ಈ ಮಾತುಗಳನ್ನಾಡಿದರು.

ರಾಗತರಂಗ ಸಂಚಾಲಕ ಉಮೇಶ ಮೇಸ್ತ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ರಾಮ ಎ.ಮೇಸ್ತ,ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರಸಾದ ಪ್ರಭು,ಸುರಭಿ ಸಂಸ್ಥೆಯ ಸಂಚಾಲಕ ಸುಧಾಕರ ಪಿ.ಬೈಂದೂರು,ಪತ್ರಕರ್ತ ಅರುಣ್ ಕುಮಾರ್ ಶಿರೂರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಶ್ರೀಕಾಂತ ಕಾಮತ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ಕುಮಾರ್ ಜಿ.ಮೇಸ್ತ ವಂದಿಸಿದರು.

News/Giri shiruru

 

 

 

 

Leave a Reply

Your email address will not be published.

seventeen − 6 =