ಬೈಂದೂರು: ಬೈಂದೂರು ಸ್ಪೋರ್ಟ್ಸ್ ಕ್ಲಬ್(ರಿ.) ಬೈಂದೂರು ಇವರ ಆಶ್ರಯದಲ್ಲಿ 4ನೇ ಬಾರಿಗೆ ರಾಜ್ಯಮಟ್ಟದ 40 ಗಜಗಳ ಹೊನಲು ಬೆಳಕಿನ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಬೈಂದೂರು ಟ್ರೋಪಿ -2024 ಬೈಂದೂರು ಗಾಂಧಿ ಮೈದಾನದಲ್ಲಿ ನಡೆಯಿತು.

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು.

ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ  ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ ಕ್ರೀಡಾ ಕ್ಷೇತ್ರದಲ್ಲಿ ಮಿಂಚಿದ ಹಲವು ಪ್ರತಿಭೆಗಳು ಬೈಂದೂರಿನಲ್ಲಿರುವುದು  ಕ್ಷೇತ್ರದ ಹೆಮ್ಮೆ.ಗಾಂಧಿ ಮೈದಾನ ಹಲವು ವರ್ಷದ ಕ್ರೀಡಾ ಇತಿಹಾಸ ಹೊಂದಿದೆ.ಪ್ರತಿ ವರ್ಷ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುವ ಜೊತೆಗೆ ಬೈಂದೂರಿನ ಬಹುತೇಕ ಕಾರ್ಯಕ್ರಮಗಳಲ್ಲಿ ಬೈಂದೂರು ಸ್ಪೋರ್ಟ್ಸ್ ಕ್ಲಬ್ ಸದಸ್ಯರ ಸಹಭಾಗಿತ್ವ ಬೈಂದೂರಿನ ಹೆಮ್ಮೆಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಜಯಾನಂದ ಹೋಬಳಿದಾರ್,ದಿನೇಶ್ ಗಾಣಿಗ,ಚರಣ್ ಬೈಂದೂರು,ಗೌರಿ ದೇವಾಡಿಗ,ಲಾವಣ್ಯ ಸಂಸ್ಥೆಯ ಗಣೇಶ ಕಾರಂತ,ಬಿ.ಆರ್ ದೇವಾಡಿಗ,ಬೈಂದೂರು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕಿರಣ್ ಬೈಂದೂರು,ಬೈಂದೂರು ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ನಿತಿನ್ ದೇವಾಡಿಗ,ಗೌರವಾಧ್ಯಕ್ಷ ರಾಜೇಶ್ ಆಚಾರ್ಯ,ಗುರು ಪ್ರಸಾದ ದೇವಾಡಿಗ,ಜೊತೆ ಕಾರ್ಯದರ್ಶಿ ಮಹೇಶ್ ಆಚಾರ್ಯ,ಗುಂಡು ಬೈಂದೂರು,ನಿತಿರಾಜ್ ಬೈಂದೂರು,ವಿಘ್ನೇಶ ಮುನ್ನಾ,ರಾಘವೇಂದ್ರ ಪೂಜಾರಿ ಪಡುವರಿ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಸಾಧಕರನ್ನು ಹಾಗೂ ದಾನಿಗಳನ್ನು ಸಮ್ಮಾನಿಸಲಾಯಿತು.ಪತ್ರಕರ್ತ ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಪ್ರಾಸ್ತಾವಿಕ  ಮಾತುಗಳನ್ನಾಡಿದರು.

ಪಾಂಚಜನ್ಯ ಕೋಟೇಶ್ವರ ಪ್ರಥಮ ಸ್ಥಾನವನ್ನು ಪಡೆಯಿತು,ಶೆಟ್ಟಿ ಎಂಪಿಯರ್ ದ್ವಿತೀಯ ಸ್ಥಾನ ಪಡೆದರು.

Leave a Reply

Your email address will not be published.

one × 5 =