ಶಿರೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಲ್ಲಿಬಾರು (ಹೊಸೂರು) ಇದರ ಶಾಲಾ ವಾರ್ಷಿಕೋತ್ಸವ ಸಮಾರಂಭ ನಡೆಯಿತು.ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ನೈಜ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಪ್ರೋತ್ಸಾಹ ಮತ್ತು ಶೈಕ್ಷಣಿಕ ವಾತಾವರಣ ನೀಡಿದಾಗ ಯಶಸ್ಸು ಸಾದ್ಯ.ಬದಲಾವಣೆಗೆ ಹೊಂದಿಕೊಂಡು ಹೊಸತನ ಅಳವಡಿಸಿಕೊಂಡಾಗ ಶೈಕ್ಷಣಿಕ ಪ್ರಗತಿ ಸಾದ್ಯ.ಗ್ರಾಮೀಣ ಭಾಗವಾದ ಹೊಸೂರಿನ ಶಾಲಾ ಶಿಕ್ಷಕರು ಮತ್ತು ಶಿಕ್ಷಣಾಭಿಮಾನಿಗಳ ಸಾಧನೆ ಶ್ಲಾಘನೀಯ ಎಂದರು.

ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ನಾಗಪ್ಪ ಮರಾಠಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಕ.ರಾ.ಸ.ನೌಕರರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ,ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ ನಾಯ್ಕ,ಶಾಲಾ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ತಿಮ್ಮ ಮರಾಠಿ,ವಕೀಲರಾದ ವಸಂತ್‌ರಾಜ್ ಹೊಸೂರು,ಪತ್ರಕರ್ತ ಅರುಣ್ ಕುಮಾರ್ ಶಿರೂರು,ಪ್ರದೀಪ ಸಿ.ಜೆ,ಗೌರವಾಧ್ಯಕ್ಷ ಮಾಸ್ತಯ್ಯ ಪೂಜಾರಿ,ದಯಾನಂದ ಮರಾಠಿ,ಕಾರ್ಯದರ್ಶಿ ವಾಸುದೇವ ಮರಾಠಿ,ವಿದ್ಯಾರ್ಥಿ ನಾಯಕ ಸಂಪತ್ ಕುಮಾರ್,ನಾಯಕಿ ವಂಶಿಕಾ ಮರಾಠಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುಭಾಷ್ ಪೂಜಾರಿ ಹೊಸೂರು ಸಿ.ಎ ಬೆಂಗಳೂರು ಹಾಗೂ ಶಾಲೆಗೆ ಧನಸಹಾಯ ನೀಡಿದ ಗಣ್ಯರನ್ನು ಸಮ್ಮಾನಿಸಲಾಯಿತು.ಸ.ಹಿ.ಪ್ರಾ.ಶಾಲೆಯ ಶಿಕ್ಷಕಿ ಮಾಲತಿ ಸ್ವಸ್ತಿವಾಚನಗೈದರು.ಶಾಲಾ ಮುಖ್ಯ ಶಿಕ್ಷಕ ಮಹಾಬಲೇಶ್ವರ ಎಸ್.ಸ್ವಾಗತಿಸಿದರು.ಶಿಕ್ಷಕ ಸುಧಾಕರ ಪಿ.ಬಂದೂರು ಕಾರ್ಯಕ್ರಮ ನಿರ್ವಹಿಸಿದರು.ಶಿಕ್ಷಕ ವಿನಾಯಕ ಪಟಗಾರ್ ವಂದಿಸಿದರು.

News/Giri shiruru

pic/suresh makodi

Leave a Reply

Your email address will not be published.

one × 4 =