ಶಿರೂರು: ಪ್ರತಿಷ್ಠಿತ ಹಿಂದಿ ವಾಹಿನಿಯ ಸೋನಿ ಟಿ.ವಿ ಯ ಕೌನ್ ಬನೇಗಾ ಕರೋಡ್‌ಪತಿ (ಕೆ.ಬಿ.ಸಿ) ಜೂನಿಯರ್ ಸೀಸನ್‌ನಲ್ಲಿ ಭಾಗವಹಿಸಿ ಶಿರೂರು ಮೂಲದ ಪ್ರಸ್ತುತ ಮುಂಬೈನಲ್ಲಿರುವ ವಿದ್ಯಾರ್ಥಿನಿ ಪ್ರತಿಷ್ಟಾ ಶೆಟ್ಟಿ 6.40 ಲಕ್ಷ ರೂಪಾಯಿ ಗೆದ್ದಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಬೈಲು ಜಾಡಿಯವರ ಮನೆ ನಾಗರಾಜ ಶೆಟ್ಟಿ ಮತ್ತು ಶಿರೂರು ಕೆಳಹೊಸ್ಮನೆ ಪ್ರಪುಲ್ಲಾ ಶೆಟ್ಟಿ ದಂಪತಿಗಳ ಪುತ್ರಿಯಾಗಿರುವ ಇವರು ಗುಜರಾತ್ ವ್ಯಾಪ್ತಿಯಲ್ಲಿ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ.2022ರ ಮಿಸ್ ಟೀನ್ ಗುಜರಾತ್ ಸ್ಪರ್ಧೆಯಲ್ಲಿ ಬಾಗವಹಿಸಿ ರನ್ನರ್ ಆಫ್ ಪ್ರಶಸ್ತಿ ಪಡೆದಿರುವ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು ಭರತನಾಟ್ಯ ಕಲಾವಿದೆ ಕೂಡ ಆಗಿದ್ದಾರೆ.
ಜೂನಿಯರ್ ಕೌನ್‌ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಒಟ್ಟು 11 ಸುತ್ತುಗಳವರೆಗೆ ಪ್ರವೇಶ ಪಡೆದು 6.40 ಲಕ್ಷ ಬಹುಮಾನ ಗೆದ್ದಿದ್ದಾರೆ.ಈ ಕಾರ್ಯಕ್ರಮ ಬುಧವಾರ ಮತ್ತು ಗುರುವಾರ ಪ್ರಸಾರವಾಗಲಿದೆ.ಮತ್ತು ಈಕೆಯ ಸಾಧನೆಗೆ ಕುಟುಂಬದವರು ಮತ್ತು ಶಿರೂರಿನ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.