ಬೈಂದೂರು: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಸೇನೇಶ್ವರ ದೇವಸ್ಥಾನ ಬೈಂದೂರು ಇದರ 50ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಪ್ರಪ್ರಥಮ ಬಾರೀ ಆರಂಭಗೊಂಡಿರುವ ಬೈಂದೂರು ದಸರಾ -2023 ವಿಜೃಂಭಣೆಯಿಂದ ಸೋಮವಾರ ಸಂಪನ್ನಗೊಂಡಿತು.ಅ.20 ರಿಂದ ಆರಂಭಗೊಂಂಡ ಬೈಂದೂರು ದಸರಾ ಅ.23 ರಂದು ವೈಭವದ ಪುರಮೆರವಣಿಗೆ ಮೂಲಕ ಸಂಪನ್ನಗೊಂಡಿತು.
ವೈಭವದ ಬೈಂದೂರು ದಸರಾ: ಬೈಂದೂರು ದಸರಾ ಅತ್ಯಂತ ವೈಭವದಿಂದ ಸಂಪನ್ನಗೊಂಡಿದೆ.ಬೈಂದೂರು ಪೇಟೆ ಸೇರಿದಂತೆ ರಥಬೀದಿಯಲ್ಲಿ ಅತ್ಯಾಕರ್ಷಕ ದೀಪಾಲಂಕಾರ ಪುರಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.ಐವತ್ತಕ್ಕೂ ಅಧಿಕ ಟ್ಯಾಬ್ಲೋ ಭಾಗವಹಿಸಿದ್ದವು.ಬೈಂದೂರಿನ ಇತಿಹಾಸದಲ್ಲಿ ಪ್ರಪ್ರಥಮ ಪ್ರಯೋಗವಾಗಿದೆ.ಸಮಿತಿಯ ಸದಸ್ಯರು ಮತ್ತು ಸಾರ್ವಜನಿಕರ ಸಹಕಾರದಿಂದ ವಿವಿಧ ಕಲಾ ಪ್ರಕಾರದ ಸ್ತಬ್ದ ಚಿತ್ರಗಳು,ಸಾಂಸ್ಕ್ರತಿಕ ವೈಭವ ಹಾಗೂ ಸಭಾ ಕಾರ್ಯಕ್ರಮ ಆಯೋಜಿಸಲಾಯಿತು.
ಸಾರ್ವಜನಿಕರ ಸಹಕಾರದಲ್ಲಿ ಇತಿಹಾಸ ನಿರ್ಮಿಸಿದ ಬೈಂದೂರು ದಸರಾ,ದೀಪಕ್ ಕುಮಾರ್ ಶೆಟ್ಟಿ: ಬೈಂದೂರು ದಸರಾ ಈ ಬಾರಿ ಅತ್ಯಂತ ವಿಜೃಂಭಣೆಯಿಂದ ನಡೆಸಿದ ಸಂತೃಪ್ತಿಯಿದೆ.ಸಾರ್ವಜನಿಕರ ಹಾಗೂ ಊರಿನವರ ಸಹಕಾರದಿಂದ ಸಂಪನ್ನಗೊಂಡಿತು.ಇದು ಬೈಂದೂರಿನ ಯಶಸ್ಸು.ಐವತ್ತನೇ ವರ್ಷದ ಬೈಂದೂರು ದಸರಾ ಸಾರ್ವಜನಿಕರು ಸಹಕಾರದಿಂದ ಇತಿಹಾಸ ನಿರ್ಮಿಸಿದೆ.ಮುಂದಿನ ದಿನದಲ್ಲಿ ಇನ್ನಷ್ಟು ವಿಜೃಂಭಣೆಯಿಂದ ನಡೆಯಲಿದೆ.

ಈ ಸಂದರ್ಭದಲ್ಲಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ,ಶಾರದೋತ್ಸವ ಸಮಿತಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಮಾಜಿ ಶಾಸಕ ಕೆ.ಗೋಪಾಲ್ ಪೂಜಾರಿ,ಗೌರವಾಧ್ಯಕ್ಷ ಎಸ್.ರಾಜು ಪೂಜಾರಿ,ಉದ್ಯಮಿ ಗೋವಿಂದ ಬಾಬು ಪೂಜಾರಿ,ನಾಗರಾಜ ಗಾಣಿಗ,ನಾಗರಾಜ ಶೆಟ್ಟಿ ಹಾಗೂ ಸಮಿತಿಯ ಸರ್ವ ಸದಸ್ಯರು ಹಾಜರಿದ್ದರು.
News/Giri shiruru
pic: Deepak shiruru