ಶಿರೂರು: ಅನಧಿಕ್ರತವಾಗಿ ಮಣ್ಣು ಸಾಗಾಟ ಮಾಡಿರುವ ಜೊತೆಗೆ ಹತ್ತು ಅಡಿಗೂ ಅಧಿಕ ಗುಡ್ಡದ ಮಣ್ಣು ತೆಗೆದ ಪರಿಣಾಮ ಶಿರೂರು ಮೇಲ್ಪಂಕ್ತಿ ಅಂಬೇಡ್ಕರ್ ಕಾಲೋನಿಯ ದಲಿತರ ಮನೆಗಳು ಕುಸಿಯುವ ಬೀತಿಯಲ್ಲಿದೆ.ಇಲ್ಲಿನ ಸುತ್ತಮತ್ತ ಹತ್ತಕ್ಕೂ ಅಧಿಕ ದಲಿತ ಕುಟುಂಬಗಳು ಐವತ್ತಕ್ಕೂ ಅಧಿಕ ವರ್ಷಗಳಿಂದ ವಾಸವಾಗಿದ್ದಾರೆ.ಮಾತ್ರವಲ್ಲದೆ ಪಂಚಾಯತ್ ಮನೆ ಸೇರಿದಂತೆ ಸರಕಾರದ ಸವಲತ್ತು ಕೂಡ ಪಡೆದಿದ್ದಾರೆ.ಆದರೆ ಸ್ಥಳೀಯ ಖಾಸಗಿ ವ್ಯಕ್ತಿಯೊಬ್ಬರು ಸ್ಥಳೀಯರಿಗೆ ಯಾವುದೇ ಮಾಹಿತಿಯಿಲ್ಲದೆ ಜಾಗದ ಮಣ್ಣು ತೆಗೆದಿರುವುದರಿಂದ ಮನೆಗಳ ಗೋಡೆಗಳು ಬಿರುಕು ಬಿಟ್ಟಿರುವ ಜೊತೆಗೆ ಅಪಾಯದಲ್ಲಿದೆ. ಹೀಗಾಗಿ ತಕ್ಷಣ ಈ ಬಗ್ಗೆ ಇಲಾಖೆ ಗಮನಹರಿಸಬೇಕು ಎಂದು ತಹಶೀಲ್ದಾರರಿಗೆ ಸ್ಥಳೀಯರು ಮನವಿ ನೀಡಿದ್ದಾರೆ.ಸ್ಥಳಕ್ಕೆ ತಹಶೀಲ್ದಾರ ಶೋಭಾಲಕ್ಷ್ಮೀ ಬೇಟಿ ನೀಡಿದ್ದು ವಿವರ ಪಡೆದು ಕ್ರಮ ತೆಗೆದುಕೊಳ್ಳುವುದಾಗಿ ತಿಳಲಿಸಿದ್ದಾರೆ.
ಈ ಜಾಗದಲ್ಲಿ ಸ್ಥಳೀಯ ಖಾಸಗಿ ವ್ಯಕ್ತಿಯೊಬ್ಬರು ಮಣ್ಣು ತೆಗೆದು ಮಾರಾಟ ಮಾಡಿದ್ದಾರೆ.ಮಾತ್ರವಲ್ಲದೆ ದಲಿತರ ಮನೆಗಳನ್ನು ಕೂಡ ತೆರವು ಮಾಡುವ ಬೆದರಿಕೆ ಹಾಕಿದ್ದು ಹಲವು ವರ್ಷದಿಂದ ಮಣ್ಣು ಸಾಗಾಟ ಮಾಡುತ್ತಿದ್ದಾರೆ ಹೀಗಾಗಿ ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ ಮತ್ತು ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಸಮರ್ಪಕ ಕ್ರಮಕೈಗೊಳ್ಳಬೇಕೆಂದು ಸ್ಥಳೀಯ ಗ್ರಾ.ಪಂ ಸದಸ್ಯ ಉದಯ ಪೂಜಾರಿ ತಿಳಿಸಿದ್ದಾರೆ.