ಶಿರೂರು: ದೇವರ ಭಯ ಜ್ಞಾನದ ಆರಂಭ ಎಂಬಂತೆ ಧಾರ್ಮಿಕ ಕಾರ್ಯಗಳು ಊರಿಗೆ ಶ್ರೇಯಸ್ಸನ್ನು ನೀಡುತ್ತದೆ.ಹಬ್ಬಗಳು,ಆಚರಣೆಗಳು ಪರಂಪರಾಗತ ಅರ್ಥವನ್ನು ಹೊಂದಿದೆ.ಪ್ರತಿ ಆಚರಣೆಗಳ ಹಿಂದೆಯೂ ಒಂದೊಂದು ಅರ್ಥವಿದೆ.ನಮ್ಮ ಹಿರಿಯರಿಂದ ಬಂದ ಸಂಪ್ರದಾಯಗಳು,ಆಚರಣೆಗಳು ಮುಂದಿನ ತಲೆಮಾರಿಗೆ ತಲುಪಿಸುವ ಜವಬ್ದಾರಿ ನಮ್ಮ ಮೇಲಿದೆ.ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಸಂಸ್ಕ್ರತಿಯ ಅರಿವು ಅಗತ್ಯ. ಸಾಮಾಜಿಕ ಕಾಳಜಿ ಹಾಗೂ ಸೇವಾ ಮನೋಭಾವನೆಯಿದ್ದಾಗ ಮಾತ್ರ ಊರಿನ ಅಭಿವ್ರದ್ದಿ ಸಾಧ್ಯ ಎಂದು ಪೆರ್ಡೂರು ಮೇಳದ ಪ್ರಸಂಗಕರ್ತ ಪವನ್ ಕಿರಣ್‌ಕೆರೆ ಹೇಳಿದರು ಮಾನಸ ಮಿತ್ರ ಮಂಡಳಿ ಆಲಂದೂರು ಇದರ 20ನೇ ವರ್ಷದ ಶಾರದೋತ್ಸವ ಬಿಂಬನ -2023 ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಮಾನಸ ಮಿತ್ರ ಮಂಡಳಿ ಅಧ್ಯಕ್ಷ ಅನೀಶ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಆಹಾರ ನಿರೀಕ್ಷಣಾಧಿಕಾರಿ ದೇವಪ್ಪ ಮಾಕೋಡಿ,ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ರವೀಂದ್ರ ಗಾಣಿಗ,ಆಲಂದೂರು ಶಾಲೆಯ ಮುಖ್ಯ ಶಿಕ್ಷಕ ಮಾಧವ ಬಿಲ್ಲವ,ಮಾಜಿ ಗ್ರಾ.ಪಂ ಸದಸ್ಯ ಉದಯ ಮಾಕೋಡಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಆಲಂದೂರು ಮಂಜುನಾಥ ಗಾಣಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಶ್ರೀಕಾಂತ ಕಾಮತ್ ಸ್ವಾಗತಿಸಿದರು.ಶಿಕ್ಷಕ ಪ್ರಕಾಶ ಮಾಕೋಡಿ ಕಾರ್ಯಕ್ರಮ ನಿರ್ವಹಿಸಿದರು.ಖಜಾಂಚಿ ಗೋಪಾಲ ಗಾಣಿಗ ವಂದಿಸಿದರು.
ವರದಿ/ಗಿರಿ ಶಿರೂರು
ಚಿತ್ರ: ಸುರೇಶ್ ಮಾಕೋಡಿ