ಬೈಂದೂರು: ಜೇಸಿರೇಟ್ ವಿಭಾಗ ಶಿರೂರು ಜೆಸಿಐ ಹಾಗೂ ಗ್ರಾಮ ಪಂಚಾಯತ್ ಶಿರೂರು ಇದರ ವತಿಯಿಂದ ಮಹಿಳೆ ಮತ್ತು ಸಮಾಜ ಕಾರ್ಯಗಾರ ಮಾಹಿತಿ ಕಾರ್ಯಕ್ರಮ ಶಿರೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.ವಲಯ ನಿರ್ದೇಶಕಿ ಅಕ್ಷತಾ ಗಿರೀಶ್ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ ಮಹಿಳೆಯರ ಕುಟುಂಬದ ಜವಬ್ದಾರಿ ಜೊತೆಗೆ ಸಮಾಜದಲ್ಲಿ ಯಶಸ್ವಿಯಾಗಿ ಬದುಕುವುದು ಸವಾಲು.ಅದರ ಜೊತೆಗೆ ಆತ್ಮಸಂತೋಷ ಮತ್ತು ಏದುರಿಸಿ ಬೆಳೆಯುವುದು ನಿಜವಾದ ಸಾಧನೆ ಎಂದರು.
ಈ ಸಂದರ್ಭದಲ್ಲಿ ಜೇಸಿರೇಟ್ ಅಧ್ಯಕ್ಷೆ ನಾಗರತ್ನ ರಾಜೇಶ್, ಪೂರ್ವಾಧ್ಯಕ್ಷೆ ಜಾಹ್ನವಿ ಪ್ರಭು,ನಿಕಟಪೂರ್ವಾಧ್ಯಕ್ಷ ಪ್ರಸಾದ್ ಪ್ರಭು, ನಿಕಟಪೂರ್ವಾಧ್ಯಕ್ಷ ರಾಜು ವಿ.ಪಿ,ಜೂನಿಯರ್ ಜೇಸಿ ಅಧ್ಯಕ್ಷ ಸುಹಾಸ್ ಜಿ. ಮೇಸ್ತ,ಸಂಜಿವೀನಿ ಸ್ವ-ಸಹಾಯ ಸಂಘದ ಅಧ್ಯಕ್ಷೆ ನಾಗವೇಣಿ ಮೊಗೇರ್ ಉಪಸ್ಥಿತರಿದ್ದರು.
ಶಿರೂರು ಜೆಸಿಐ ಅಧ್ಯಕ್ಷ ಸುರೇಶ್ ಮಾಕೋಡಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯದರ್ಶಿ ನಾಗರಾಜ ಪ್ರಭು ವಂದಿಸಿದರು.