ಬೈಂದೂರು: ಕಳೆದೆರಡು ದಿನಗಳಿಂದ ಬೈಂದೂರು ಭಾಗದಲ್ಲಿ ಮಳೆ ಎಡೆ ಬಿಡದೆ ಸುರಿಯುತ್ತಿದೆ.ಗ್ರಾಮೀಣ ಭಾಗದ ಕ್ರಷಿ ಚಟುವಟಿಕೆ ಸೇರಿದಂತೆ ಜನಜೀವನ ಅಸ್ಥವ್ಯಸ್ಥಗೊಂಡಿದೆ.ಹಳ್ಳಿಭಾಗದಲ್ಲಿ ಬಹುತೇಕ ಮರ ಉರುಳಿದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.ರಾ.ಹೆ.ಮೇಲೆ ನೀರು ಹರಿಯುತಿದ್ದು ಒತ್ತಿನೆಣೆ ಪರಿಸರದಲ್ಲಿ ಗುಡ್ಡದ ಮಣ್ಣು ರಸ್ತೆಗೆ ಹರಿದಿದೆ.

ಯಡ್ತರೆ ಗ್ರಾಮದ ಮಾಚಿ ಪೂಜಾರಿ ಕೊಟ್ಟಿಗೆ ಭಾಗಶ ಹಾನಿಯಾಗಿದೆ.ಬೀಚಮ್ಮ ಶೆಟ್ಟಿಯವರ ವಾಸದ ಮನೆ ಕುಸಿದು ನಲವತ್ತು ಸಾವಿರಕ್ಕೂ ಅಧಿಕ ಮೌಲ್ಯದ ಹಾನಿ ಸಂಭವಿಸಿದೆ.ನಾಟಿ ಮಾಡಿದ ಕ್ರಷಿ ಭೂಮಿ ಬಹುತೇಕ ಜಲಾವ್ರತಗೊಂಡಿದೆ.

 

Leave a Reply

Your email address will not be published.

2 + 16 =