ಬೈಂದೂರು: ಅಂತರಾಷ್ಟ್ರೀಯ ಬೆಸುಗೆಯ ಭಾಂಧವ್ಯ ಹೊಂದಿರುವ ರೋಟರಿ ಸಂಸ್ಥೆ ಮೂಲಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರೋಟರಿ ಸಂಸ್ಥೆಯ ಹೆಮ್ಮೆ.ದುಡಿಮೆಯ ಜೊತೆಗೆ ಒಂದಿಷ್ಟು ಸಂಪಾದನೆಯನ್ನು ಸಮಾಜಕ್ಕೆ ವಿನಿಯೋಗಿಸುವುದು ಸಂತೃಪ್ತಿ ನೀಡುತ್ತಿದೆ.ಶಿಕ್ಷಣ,ಆರೋಗ್ಯ ಸಾಮಾಜಿಕ ಕ್ಷೇತ್ರದಲ್ಲಿ ರೋಟರಿ ಸಾಧನೆ ಅನನ್ಯ ಎಂದು ಮಾಜಿ ಜಿಲ್ಲಾ ಗವರ್ನರ್ ರಾಜಾರಾಮ್ ಭಟ್ ಹೇಳಿದರು ಅವರು ಬೈಂದೂರು ಯಡ್ತರೆ ರೋಟರಿ ಭವನದಲ್ಲಿ ನಡೆದ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭದಲ್ಲಿ ನೂತನ ಅಧ್ಯಕ್ಷರಾದ ಎಸ್.ಪ್ರಸಾದ ಪ್ರಭು ರವರಿಗೆ ರೋಟರ್ ಕಾಲರ್ ಹಸ್ತಾಂತರಿಸಿ ಈ ಮಾತುಗಳನ್ನಾಡಿದರು.
ಬೈಂದೂರು ರೋಟರಿ ಕ್ಲಬ್ ನೂತನ ಅಧ್ಯಕ್ಷ ಪ್ರಸಾದ ಪ್ರಭು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರೋಟರಿ ಝೋನ್ 16ರ ಸಹಾಯಕ ಗವರ್ನರ್ ಡಾ.ಸಂದೀಪ್ ಶೆಟ್ಟಿ,ವಲಯ ಸೇನಾನಿ ಕೆ.ರಂಜಿತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಐದು ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ಹಸ್ತಾಂತರಿಸಲಾಯಿತು ಹಾಗೂ ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.ಜತೀಂದ್ರ ಮರವಂತೆ ಅವರು ಸಂಪಾದಿಸಿದ ರೋಟರಿ ಬುಲೆಟಿನ್ ಬಿಡುಗಡೆಗೊಳಿಸಲಾಯಿತು.
ಬೈಂದೂರು ರೋಟರಿ ನಿಕಟಪೂರ್ವಧ್ಯಕ್ಷ ಎಚ್.ಉದಯ ಆಚಾರ್ಯ ಸ್ವಾಗತಿಸಿದರು.ನಿಕಟಪೂರ್ವ ಕಾರ್ಯದರ್ಶಿ ಸುಧಾಕರ ಪಿ.ಬೈಂದೂರು ವಾರ್ಷಿಕ ವರದಿ ಮಂಡಿಸಿದರು.ಮಂಜುನಾಥ ಮಹಾಲೆ ಕಾರ್ಯಕ್ರಮ ನಿರ್ವಹಿಸಿದರು.ನೂತನ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ.ಉಪ್ಪುಂದ ವಂದಿಸಿದರು.