ಬೈಂದೂರು; ಚುನಾವಣಾ ಸಮಯದಲ್ಲಿ ಜನಸಾಮಾನ್ಯರ ಮೇಲೆ ನೀತಿ ಸಂಹಿತೆ ಸ್ವಾತಂತ್ರ್ಯ ಹರಣ ಸಲ್ಲದು.ಗಂಭೀರತೆ ಅರಿತು ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು.ಒಂದು ಪಕ್ಷದ ಕೈಗೊಂಬೆಯಂತೆ ಕರ್ತವ್ಯ ನಿರ್ವಹಿಸಬಾರದು ಮತ್ತು ಕಾರ್ಯಕರ್ತರ ಆತ್ಮಸ್ತರ್ಯ ಕುಂದಿಸುವ ಪ್ರಯತ್ನ ಸಲ್ಲದು ಎಂದು ಬಿಜೆಪಿ ಪಕ್ಷದ ವಕೀಲರ ಸಮೂಹದ ಪರವಾಗಿ ಶರತ್ ಶೆಟ್ಟಿ ಹಕ್ಲಾಡಿ ಹೇಳಿದರು ಅವರು ಬೈಂದೂರು ಅಂಬಿಕಾ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಈ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಟ ಸಂಚಾಲಕ ಕೈಲಾಡಿ ಬಾಲಕೃಷ್ಣ ಶೆಟ್ಟಿ,ಶರತ್ ಶೆಟ್ಟಿ ಹಕ್ಲಾಡಿ,ರಾಘವೇಂದ್ರ ಚರಣ್ ನಾವಡ,ಶ್ರೀಧರ ಮೊಗವೀರ,ರವಿಶ್ಚಂದ್ರ ಶೆಟ್ಟಿ,ಗುರುಮೂರ್ತಿ ರಾವ್,ರವಿ ಶೆಟ್ಟಿ ಮಚ್ಚಟ್ಟು,ಕಿಶೋರ್ ಕುಮಾರ್ ಉಪಸ್ಥಿತರಿದ್ದರು.

News/Girish shiruru

 

 

Leave a Reply

Your email address will not be published.

20 + twenty =