ಶಿರೂರು: ಬೈಂದೂರು ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಶಿರೂರು ಜಿ.ಪಂ ವ್ಯಾಪ್ತಿಯಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.ಬಳಿಕ ಮಾತನಾಡಿದ ಅವರು ಬೈಂದೂರು ಕ್ಷೇತ್ರಾದ್ಯಂತ ಕಾರ್ಯಕರ್ತರು ಕಾಂಗ್ರೇಸ್ ಗೆಲುವಿಗಾಗಿ ಮನೆ ಮನೆಗೆ ತೆರಳಿ ಮತಯಾಚಿಸುತ್ತಿದ್ದಾರೆ.ಬಿಜೆಪಿಯ ಜನವಿರೋಧಿ ನೀತಿ,ಬೆಲೆ ಏರಿಕೆ ಜನಸಾಮಾನ್ಯರ ನೆಮ್ಮದಿಯನ್ನು ಕಸಿದುಕೊಂಡಿದೆ.ಸುಳ್ಳು ಪ್ರಚಾರದ ಮೂಲಕ ಬಿಜೆಪಿ ಮತದಾರರ ದಾರಿತಪ್ಪಿಸುವ ಪ್ರಯತ್ನ ಮಾಡುತ್ತಿದೆ.ಇದು ಬಿಜೆಪಿಯ ಕೀಳು ಸಂಸ್ಕ್ರತಿಯನ್ನು ಬಿಂಬಿಸುತ್ತದೆ.ಚುನಾವಣೆಯಲ್ಲಿ ತಕ್ಕ ಉತ್ತರ ಮತದಾರರು ನೀಡಲಿದ್ದಾರೆ.ಬಿಜೆಪಿ ಪಕ್ಷವನ್ನು ಬಹಿಷ್ಕರಿಸುವ ಮೂಲಕ ಕಾಂಗ್ರೇಸ್ ಪಕ್ಷದ ಪರ ಅಪಾರ ಒಲವು ಹೊಂದಿದ್ದಾರೆ.ನಾಲ್ಕು ಬಾರಿ ಈ ಕ್ಷೇತ್ರದ ಶಾಸಕನಾಗಿ ಸೇವೆ ಸಲ್ಲಿಸಿದೆ.ನನ್ನ ಜೀವನದ ಕೊನೆಯ ಚುನಾವಣೆ ಆದ ಕಾರಣ ಪ್ರಚಂಡ ಬಹುಮತದಿಂದ ಗೆಲ್ಲಿಸುವ ವಿಶ್ವಾಸವಿದೆ ಎಂದರು.
ಈ ಸಂದರ್ಭದಲ್ಲಿ ನೂರಾರು ಕಾಂಗ್ರೇಸ್ ಕಾರ್ಯಕರ್ತರು ವಾಹನ ಜಾಥ ನಡೆಸಿದರು.ರಸ್ತೆಯುದ್ದಕ್ಕೂ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೂ ಹಾರ ನೀಡಿ ಬೆಂಬಲ ಸೂಚಿಸಿದರು.