ಬೈಂದೂರು,ನ.14: ದೇಶದ ಮಹತ್ವಾಕಾಂಕ್ಷೆಯ ಯೋಜನೆಯಾದ ವಂದೆ ಭಾರತ್‌ ಬೆಂಗಳೂರು -ಮಡಗಾಂವ್‌ ರೈಲನ್ನು ಬೈಂದೂರಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.ನಿಗದಿತ ಸಮಯಕ್ಕಿಂತ ಎರಡು ಗಂಟೆ ವಿಳಂಬವಾಗಿ ಆಗಮಿಸಿದರು ಕೂಡ ನೂರಾರು ಜನ ಸಾರ್ವಜನಿಕರು ರೈಲ್ವೆ ಯಾತ್ರಿ ಸಂಘದ ಸದಸ್ಯರು ಸಂಭ್ರಮದಿಂದ ಸ್ವಾಗತಿಸಿ ಸಂತಸ ಹಂಚಿಕೊಂಡರು
ಬೈಂದೂರಿನ ಭವಿಷ್ಯದ ಅಭಿವ್ರದ್ದಿ ಚಿತ್ರಣ ಬದಲಾಗಲಿದೆ; ಶಿವಮೊಗ್ಗ ಲೋಕಸಭಾ ಸಂಸದ ಬಿ. ವೈ ರಾಘವೇಂದ್ರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳವಾದ ಕೊಲ್ಲೂರು ಬೈಂದೂರು ಕ್ಷೇತ್ರದಲ್ಲಿದೆ.ತಾಯಿಯ ಆಶೀರ್ವಾದದಿಂದ ಕಳೆದ ಹತ್ತು ವರ್ಷದಲ್ಲಿ ದಾಖಲೆಯ ಅಭಿವೃದ್ದಿ ಕೆಲಸಗಳಾಗಿದೆ.ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿ ಗೌರವ ಹೆಚ್ಚಿದೆ.ದೇಶದ ರೈಲ್ವೆ ನಿಲ್ದಾಣಗಳು ಇಂದು ವಿಮಾನ ನಿಲ್ದಾಣಕ್ಕೆ ಕಡಿಮೆ ಇಲ್ಲದಂತೆ ಶುಚಿತ್ವ ಸ್ವಚ್ಚತೆ ವ್ಯವಸ್ಥೆ ಹೊಂದಿದೆ.ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಪ್ರತಿದಿನ ಮೂರರಿಂದ ನಾಲ್ಕು ಸಾವಿರ ಪ್ರಯಾಣಿಕರು ಆಗಮಿಸುತ್ತಾರೆ ಅತ್ಯಂತ ಸಮೀಪದ ಜೊತೆಗೆ ಕೊಲ್ಲೂರು ಹೆದ್ದಾರಿ ನಿರ್ಮಾಣವಾದ ಬಳಿಕ ಇನ್ಬಷ್ಟುಸನಿಹವಾಗಲಿದೆ.ಕೊಲ್ಲೂರಿಗೆ ಉಪನಗರವಾಗಿ ಬೈಂದೂರು ಬೆಳೆಯುತ್ತಿದೆ.ನೂರು ಕೋಟಿ ಅನುದಾನ ರೈಲ್ವೆ ನಿಲ್ದಾಣಕ್ಕೆ ಬಿಡುಗಡೆಯಾಗಿದ್ದು ಭವಿಷ್ಯದಲ್ಲಿ ಬೈಂದೂರಿನ ಅಭಿವ್ರದ್ದಿ ಚಿತ್ರಣ ಬದಲಾಗಲಿದೆ ಎಂದು ಬಿ ವೈ ರಾಘವೇಂದ್ರ ಹೇಳಿದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ  ಮಾತನಾಡಿ ರಾಘಣ್ಣರಂತಹ ಸಂಸದರನ್ನು ಪಡೆದ ಪರಿಣಾಮ ಈ ಮಟ್ಟಿನ ಅಭಿವ್ರದ್ದಿ ಕಾಣಲು ಸಾದ್ಯವಾಗಿದೆ.ಹೋರಾಟ ಮತ್ತು ಪ್ರಯತ್ನ ಯಾವ ಮಟ್ಟಿಗೆ ಅನೂಕೂಲವಾಗುತ್ತದೆ ಎನ್ನುವುದು ಬೈಂದೂರು ರೈಲ್ವೆ ಹೋರಾಟ ಸಮಿತಿಯ ಪ್ರಯತ್ನ ಸ್ಪಷ್ಟನಿದರ್ಶನವಾಗಿದೆ ವಂದೆ ಭಾರತ್‌ ರೈಲು ಆರಂಭದಿಂದ ಕರಾವಳಿಯ ಅಭಿವ್ರದ್ದಿಗೆ ಹೊಸ ಬೆಳವಣಿಗೆ ದೊರೆಯಲಿದೆ ಎಂದರು.

ಈ ಸಂದರ್ಭದಲ್ಲಿ ಕೊಂಕಣ ರೈಲ್ವೆ ಅಧಿಕಾರಿ ಮಂಜುನಾಥ ದೇವಾಡಿಗ,ಜಿ.ಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ,ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಆರ್‌.ಕೆ ಉಪಸ್ಥಿತರಿದ್ದರು.
ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಜಯಾನಂದ ಹೋಬಳಿದಾರ್‌ ಸ್ವಾಗತಿಸಿದರು.ಗೌರವಾಧ್ಯಕ್ಷ ಕೆ.ವೆಂಕಟೇಶ ಕಿಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಿಕ್ಷಕ ಗಣಪತಿ ಹೋಬಳಿದಾರ್‌ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವರದಿ/ಗಿರಿ ಶಿರೂರು

Leave a Reply

Your email address will not be published. Required fields are marked *

one + 20 =