ಬೈಂದೂರು: ಬಿಜೆಪಿ ಪಕ್ಷ ಸುಳ್ಳುಗಳನ್ನು ಹೇಳುವ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡಿ ಚುನಾವಣೆ ಎದುರಿಸುವುದನ್ನು ಹಿಂದಿನಿಂದಲೂ ಮಾಡುತ್ತಿದೆ.ಕಳೆದ ಬಾರಿ ಪರೇಶ್ ಮೇಸ್ತ ಸಾವಿನ ಪ್ರಕರಣವನ್ನು ಕಾಂಗ್ರೇಸ್ ವಿರುದ್ದ ಎತ್ತಿಕಟ್ಟುವ ಮೂಲಕ ರಾಜಕೀಯ ಲಾಭ ಪಡೆದುಕೊಂಡಿದೆ.ಬಿಜೆಪಿಗೆ ಈಗ ಸಂಕಷ್ಟದ ಕಾಲ ಬಂದಿದೆ.ಅವರ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ.ಹೀಗಾಗಿ ಈ ಬಾರಿ ಬಿಜೆಪಿ ಕಿತ್ತೊಗೆಯಬೇಕು ಎಂದು ಮತದಾರರ ಸಂಕಲ್ಪ ಇದೆ.ಬಜರಂಗದಳ ನಿಷೇದಿಸುವ ಪ್ರಸ್ತಾವನೆ ಕಾಂಗ್ರೇಸ್ ಪಕ್ಷದ ಮುಂದಿಲ್ಲ ಬಿಜೆಪಿ ಓಟಿಗಾಗಿ ವಾಸ್ತವ ವಿಷಯವನ್ನು ತಿರುಚಿ ಸುಳ್ಳು ಸುದ್ದಿ ಹರಡುತ್ತಿದೆ ಹೀಗಾಗಿ ಪ್ರಜ್ಞಾವಂತ ಮತದಾರರು ಕಾಂಗ್ರೇಸ್ ಬೆಂಬಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಹೇಳಿದರು ಅವರು ಬೈಂದೂರು ಕಾಂಗ್ರೇಸ್ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಬಿಜೆಪಿ ಇಂಜಿನ್ ಭರವಸೆ ಕಳೆದುಕೊಂಡಿದೆ.ಹೀಗಾಗಿ ಡಬಲ್ ಇಂಜಿನ್ ಅಳವಡಿಸುವ ಪ್ರಯತ್ನ ಮಾಡುತ್ತಾರೆ ಒಂದು ಇಂಜಿನ್ ಕೈಕೊಟ್ಟಾಗ ಮಾತ್ರ ಇನ್ನೊಂದು ಇಂಜಿನ್ ಬೇಕಾಗುತ್ತದೆ.ಆದರೆ ಬಿಜೆಪಿಯ ಎರಡು ಇಂಜಿನ್ ಕೂಡ ಸರಿಯಿಲ್ಲ.ಸಾಮಾಜಿಕ ನ್ಯಾಯ ಕೊಡುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ.ಭ್ರಷ್ಟಾಚಾರದ ಮೂಲಕ ಬಿಜೆಪಿ ಜನರ ವಿಶ್ವಾಸ ಕಳೆದುಕೊಂಡಿದೆ.ಹೀಗಾಗಿ ಬೈಂದೂರು ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಪ್ರಚಂಡ ವಿಜಯ ಸಾಧಿಸಲಿದೆ ಎಂದರು.
ಈ ಸಂದರ್ಭದಲ್ಲಿ ಬೈಂದೂರು ಕಾಂಗ್ರೇಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ,ಕಿಶನ್ ಹೆಗ್ಡೆ ಕೊಳ್ಕೆಬೈಲ್,ಕಾಂಗ್ರೇಸ್ ಮುಖಂಡರಾದ ಎಸ್.ಪ್ರಕಾಶ್ಚಂದ್ರ ಶೆಟ್ಟಿ,ರಘುರಾಮ ಶೆಟ್ಟಿ,ಎಸ್.ರಾಜು ಪೂಜಾರಿ,ಮುರುಳಿ ಶೆಟ್ಟಿ,ಕೃಷ್ಣಮೂರ್ತಿ,ನಾಗರಾಜ ಗಾಣಿಗ,ವಡಂಬಳ್ಳಿ ಜಯರಾಮ ಶೆಟ್ಟಿ,ದಿನೇಶ ಪುತ್ರನ್,ಬೈಂದೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮದನ್ ಕುಮಾರ್ ಉಪ್ಪುಂದ,ಯುವ ಕಾಂಗ್ರೇಸ್ ಅಧ್ಯಕ್ಷ ಶೇಖರ ಪೂಜಾರಿ ಉಪಸ್ಥಿತರಿದ್ದರು.