ಶಿರೂರು: ಮಂಗಳೂರು ವಿದ್ಯುಚಕ್ತಿ ಸರಬರಾಜು ಕಂಪೆನಿ ನಿ.ಮಂಗಳೂರು ಇದರ ಶಿರೂರು ಶಾಖೆಯಲ್ಲಿ ಕಳೆದ 11 ವರ್ಷಗಳಿಂದ ಲೈನ್ ಮ್ಯಾನ್ ಆಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಸಂತೋಷ್ ಲಮಾಣಿ ಹಾಗೂ ಮೌಲನಾ ಸಾಬ್ ಚಪ್ಪರಬಂದ್ ರವರ ಬೀಳ್ಕೊಡುಗೆ ಸಮಾರಂಭ ಶಿರೂರು ಮೆಸ್ಕಾಂ ಶಾಖಾ ಕಛೇರಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಅವರನ್ನು ಶಿರೂರು ಮೆಸ್ಕಾಂ ಶಾಖೆಯ ಸಿಬ್ಬಂದಿಗಳ ವತಿಯಿಂದ ಸನ್ಮಾನಿಸಲಾಯಿತು.
ಬೈಂದೂರು ಉಪವಿಭಾಗದ ಸಹಾಯಕ ಇಂಜಿನಿಯರ್ ಶಿವಾನಂದ್ ನಾಯ್ಕ್,ಬೈಂದೂರು ಶಾಖೆಯ ಸಹಾಯಕ ಇಂಜಿನಿಯರ್ ಕೃಷ್ಣ ಪೂಜಾರಿ,ಕಿರಿಯ ಇಂಜಿನಿಯರ್ ರಾಘವೇಂದ್ರ,ಕಿರಿಯ ಇಂಜಿನಿಯರ್ ಅಭಿಷೇಕ್,ನೌಕರರ ಸಂಘದ ಕಾರ್ಯದರ್ಶಿ ವಸಂತ್ ನಾಯಕ್,ವಿದ್ಯುತ್ ಗುತ್ತಿಗೆದಾರ ಮಹಾದೇವ ಮೇಸ್ತ ಶಿರೂರು ಹಾಜರಿದ್ದರು.