ಶಿರೂರು; ಶ್ರೀದುರ್ಗಾಂಬಿಕಾ ದೇವಸ್ಥಾನ ಕೋಟೆಮನೆ ಶಿರೂರು,ಶ್ರೀ ದುರ್ಗಾಂಬಿಕಾ ಸೇವಾ ಸಂಘ (ರಿ.) ಕೋಟೆಮನೆ ಶಿರೂರು ಇದರ ನವರಾತ್ರಿ, ವಿಜಯದಶಮಿ ಉತ್ಸವ ಹಾಗೂ ಕೋಟೆಮನೆ ದಸರಾ ಉತ್ಸವ -2026 ಅ.11 ರಿಂದ 21ರ ವರೆಗೆ ನಡೆಯಲಿದೆ.
ಪ್ರತಿದಿನ ಬೆಳಿಗ್ಗೆ ದೇವಳದಲ್ಲಿ ವಿವಿಧ ಪೂಜಾ ಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮ,ಭಕ್ತಿ ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ ಪ್ರತಿದಿನ ಮಹಾಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.
ಅ.21 ರಂದು ವಿಜಯ ದಶಮಿ ಪ್ರಯುಕ್ತ ಪಲ್ಲಕ್ಕಿ ಉತ್ಸವ,ಗಣ ಸಂತೃಪ್ತಿ, ಅಂಬು ಪ್ರಯೋಗ,ತುಲಾಭಾರ ಸೇವೆ,ಭಕ್ತಿ ಸಾಂಸ್ಕ್ರತಿ ಕಾರ್ಯಕ್ರಮ ಮದ್ಯಾಹ್ನ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಹಾಗೂ ಪ್ರತಿದಿನ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
