ಶಿರೂರು: ಮಾನಸ ಮಿತ್ರ ಮಂಡಳಿ ಆಲಂದೂರು ಇದರ 23ನೇ ವರ್ಷದ ಶಾರದೋತ್ಸವದ ಪ್ರಯುಕ್ತ ದಸರಾ ಕ್ರೀಡಾಕೂಟ ಆಲಂದೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು.
ಮಾನಸ ಮಿತ್ರ ಮಂಡಳಿ ಅಧ್ಯಕ್ಷ ಸುರೇಶ ಎಸ್.ಪೂಜಾರಿ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಕ್ರೀಡೆಯೆನ್ನುವುದು ಕೇವಲ ಮನರಂಜನೆಗಷ್ಟೆಸೀಮಿತವಲ್ಲ ಬದಲಾಗಿ ಯುವಕರ ಕ್ರಿಯಾಶೀಲತೆಯನ್ನು ಪ್ರತಿನಿಧಿಸುವ ಅವಕಾಶ ನೀಡುತ್ತದೆ. ಮಾತ್ರವಲ್ಲದೆ ಕ್ರೀಡೆಯಿಂದ ಯುವಕರನ್ನು ಒಗ್ಗೂಡಿಸಲು ಸಾಧ್ಯ ಎಂದರು.
ಕೆರಾಡಿ ವರಸಿದ್ದಿವಿನಾಯಕ ಕಾಲೇಜಿನ ಆಡಳಿತ ನಿರ್ದೇಶಕ ಮಂಜುನಾಥ ಆರ್.ಗಾಣಿಗ , ಆಲಂದೂರು ಶಾಲಾ ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಅಶ್ವಿನಿ ಕೊಠಾರಿ,ಮಾನಸ ಮಿತ್ರ ಮಂಡಳಿ ಕಾರ್ಯದರ್ಶಿ ಕೃಷ್ಣ ಎಮ್.ಪೂಜಾರಿ,ಮಾನಸ ಮಹಿಳಾ ಮಂಡಳಿ ಕಾರ್ಯದರ್ಶಿ ಪ್ರವೀಣ ಶೆಟ್ಟಿ,ಮಾನಸ ಮಿತ್ರ ಮಂಡಳಿ ಮಾಜಿ ಅಧ್ಯಕ್ಷ ಚಂದ್ರ ಕೊಠಾರಿ,ರಾಜು ವಿ.ಪಿ,ಹರೀಶ ಪೂಜಾರಿ ಹಾಗೂ ಮಾನಸ ಮಿತ್ರ ಮಂಡಳಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಸುರೇಶ ಮಾಕೋಡಿ ಸ್ವಾಗತಿಸಿದರು.ಶಿಕ್ಷಕ ಶ್ರೀಕಾಂತ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಪ್ರಕಾಶ ಮಾಕೋಡಿ ವಂದಿಸಿದರು.
ವರದಿ/ಗಿರಿ ಶಿರೂರು