ಬೈಂದೂರು,ಸೆ.21: ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘ(ನಿ.) ಆಲೂರು ಇದರ 2025 -26 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಆಲೂರು ಶ್ರೀರಾಮ ಮಂದಿರದ ಸಭಾಮಂಟಪದಲ್ಲಿ ನಡೆಯಿತು.
ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಚ್.ಮಂಜಯ್ಯ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು ವರ್ಷದಿಂದ ವರ್ಷಕ್ಕೆ ಗುರಿ ಮೀರಿದ ಸಾಧನೆಯೊಂದಿಗೆ ಅಭಿವೃದ್ಧಿ ಹೊಂದುತ್ತಾ ಬಂದಿದೆ. ಸಂಘವು ಸದಸ್ಯರು ಹಾಗೂ ಗ್ರಾಹಕರ ಸಹಕಾರದಿಂದ ವರದಿ ವರ್ಷದ ಅಂತ್ಯಕ್ಕೆ ರೂ. 47.25 ಕೋಟಿ ಠೇವಣಾತಿ ಹೊಂದಿದ್ದು .ಒಟ್ಟು 295 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದು.ಪ್ರಸ್ತುತ ವರದಿ ಸಾಲಿನಲ್ಲಿ 90 ಲಕ್ಷ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ ಶೇ.13% ಡಿವಿಡೆಂಡ್ ಘೋಷಿಸಲಾಗಿದೆ.ಸಂಘವು ಸದಸ್ಯರ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಕೃಷಿ ಸಾಲಗಳನ್ನು ನೀಡುವ ಮೂಲಕ ಕೃಷಿಕರನ್ನು ಪ್ರೋತ್ಸಾಹಿಸುತ್ತಿದೆ. ಸಂಘದ ಸಾಧನೆಗೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಪ್ರಶಸ್ತಿ ಲಭಿಸಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಮಾಜಿ ಮ್ಯಾನೇಜರ್ ಸಂಜೀವ ಪೂಜಾರಿ ಯವರನ್ನು ಸಮ್ಮಾನಿಸಲಾಯಿತು ಹಾಗೂ ಸಂಘದ ವ್ಯಾಪ್ತಿಯ ಶಾಲೆಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.
ಸಂಘದ ಉಪಾಧ್ಯಕ್ಷರಾದ ಸತೀಶ ಶೆಟ್ಟಿ,ನಿರ್ದೇಶಕರಾದ ಸಂತೋಷ ಕುಮಾರ್ ಶೆಟ್ಟಿ,ರಘುರಾಮ ದೇವಾಡಿಗ,ಸೂಲ್ಯ ಪೂಜಾರಿ,ಗೋಪಾಲ ಅಲಿಯಾಸ್ ಗೋವಿಂದ,ಅಕ್ಕಯ್ಯಯಾನೆ ಆಶಾ,ಅಮರನಾಥ ಶೆಟ್ಟಿ, ಲಲಿತಾ ಕುಲಾಲ್, ರಾಜೇಶ ದೇವಾಡಿಗ,ಚಂದ್ರಶೇಖರ ಶೆಟ್ಟಿ,ಸುರೇಶ,ಸುರೇಂದ್ರ ,ರತ್ನಾಕರ ಆಚಾರ್ಯ ಉಪಸ್ಥಿತರಿದ್ದರು.
ನಿರ್ದೇಶಕ ರಘುರಾಮ ದೇವಾಡಿಗ ಸ್ವಾಗತಿಸಿದರು.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮ ಪೂಜಾರಿ ಸಂಘದ ವಾರ್ಷಿಕ ವರದಿ ಮಂಡಿಸಿ ವಂದಿಸಿದರು.ಸಂಘದ ಸಿಬ್ಬಂದಿ ಗಣೇಶ ಕಾರ್ಯಕ್ರಮ ನಿರೂಪಿಸಿದರು.